ಮೈಸೂರಿನ ಬೆಮಲ್ ಬಳಿ ಚಿರತೆ: ವೈರಲ್ ಆದ ಚಿತ್ರಗಳು

7

ಮೈಸೂರಿನ ಬೆಮಲ್ ಬಳಿ ಚಿರತೆ: ವೈರಲ್ ಆದ ಚಿತ್ರಗಳು

Published:
Updated:

ಮೈಸೂರು: ನಗರದ ಹೆಬ್ಬಾಳದ ಬೆಮಲ್ ಕಾರ್ಖಾನೆಯ ಬಳಿ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಕೆಳಗೆ ಬೀಳಿಸಿ ಕ್ಷಣಕಾಲ ಆತಂಕ ಮೂಡಿಸಿತು. ತಕ್ಷಣ ಅರಣ್ಯ ಇಲಾಖೆಗೆ ಸಾರ್ವಜನಿಕರು ಸುದ್ದಿ ಮುಟ್ಟಿಸಿದರು. ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಕೆಲವರು ಸೆರೆ ಹಿಡಿದರು. ಸ್ವಲ್ಪ ಹೊತ್ತು ರಸ್ತೆಯಲ್ಲಿ ಕುಳಿತ ಚಿರತೆ ನಂತರ ಮುಳ್ಳುಗಂಟಿ ಗಿಡಗಳ ನಡುವೆ ಕಣ್ಮರೆಯಾಯಿತು‌.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಅಧಿಕಾರಿ ದೇವರಾಜು, 'ಬೆಮಲ್ ಸಮೀಪ ಚಿರತೆ ಇರುವುದು ಇದೇ ಮೊದಲೇನಲ್ಲ. ಹಿಂದೆಯೂ ಸಾಕಷ್ಟು ಬಾರಿ ಇಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಪತ್ತೆಗೆ ಬೆಮಲ್ ಆವರಣದಲ್ಲಿ ಬೋನು ಇಡಲಾಗಿದೆ. ಮನುಷ್ಯರಿಗೆ ಚಿರತೆಗಳು ತೊಂದರೆ ಮಾಡುವುದಿಲ್ಲ. ಸಾರ್ವಜನಿಕರು ಭಯಗೊಳ್ಳಬಾರದು.' ಎಂದು ತಿಳಿಸಿದ್ದಾರೆ.

ಚಿರತೆ ರಸ್ತೆಯಲ್ಲಿ ಓಡಾಡುತ್ತಿರುವ ಚಿತ್ರಗಳು ಚಾಮುಂಡಿಬೆಟ್ಟದಲ್ಲಿ ಕಾಣಿಸಿಕೊಂಡ ಚಿರತೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ.

ಬರಹ ಇಷ್ಟವಾಯಿತೆ?

 • 5

  Happy
 • 4

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !