ಬುಧವಾರ, ಸೆಪ್ಟೆಂಬರ್ 18, 2019
25 °C

ಮೈಸೂರಿನಲ್ಲಿ ಪೇಜಾವರ ಶ್ರೀಗಳಿಂದ ದಲಿತರ ಕೇರಿಯಲ್ಲಿ ಸಾಮರಸ್ಯ ನಡಿಗೆ

Published:
Updated:

ಮೈಸೂರು: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಬುಧವಾರ ಸಂಜೆ ನಗರದ ದಲಿತರ ಕೇರಿಯಲ್ಲಿ ಸಾಮರಸ್ಯದ ನಡಿಗೆ ನಡೆಸಿದರು.

ಪೂರ್ಣಕುಂಭ ಹೊತ್ತ ಮಹಿಳೆಯರು, ಬಾಲಕಿಯರು ಹಾದಿಯುದ್ದಕ್ಕೂ ಪುಷ್ಪಾರ್ಚನೆ ಮಾಡುತ್ತ ಸ್ವಾಮೀಜಿ ಜತೆ ಸಾಮರಸ್ಯ ನಡಿಗೆಯಲ್ಲಿ ಭಾಗಿಯಾದರು.

ಈ ಸಾಮರಸ್ಯ ನಡಿಗೆ ನಡೆಯುವಾಗ ತುಂತುರು ಮಳೆ ಆರಂಭವಾಯಿತು. ಮಳೆ ಬಿರುಸುಗೊಳ್ಳುತ್ತಿದ್ದಂತೆ ವಿಶ್ವೇಶತೀರ್ಥ ಸ್ವಾಮೀಜಿ ರಾಚಮ್ಮ-ಚೌಡಪ್ಪ ದಂಪತಿ ಮನೆ ಪ್ರವೇಶಿಸಿದರು. 

ರಾಚಮ್ಮ-ಚೌಡಪ್ಪ ದಂಪತಿ ಸ್ವಾಮೀಜಿ ಅವರಿಗೆ ತುಳಸಿ ಮಾಲೆ ಅರ್ಪಿಸಿ, ಪಾದಪೂಜೆ ನೆರವೇರಿಸಿದರು. 

Post Comments (+)