ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ನ್ಯಾಯಬೆಲೆ ಅಂಗಡಿ ಅಮಾನತು

Last Updated 11 ಏಪ್ರಿಲ್ 2020, 16:23 IST
ಅಕ್ಷರ ಗಾತ್ರ

ಮೈಸೂರು: ಪಡಿತರ ಚೀಟಿದಾರರಿಂದ ಹಣ ವಸೂಲಿ ಸೇರಿದಂತೆ, ಇನ್ನಿತರ ಅಕ್ರಮ ಎಸಗಿ ಸಿಕ್ಕಿಬಿದ್ದ ಜಿಲ್ಲೆಯ 4 ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಶಿವಣ್ಣ ತಿಳಿಸಿದ್ದಾರೆ.

ಮೈಸೂರಿನ ವಿ.ವಿ.ಮೊಹಲ್ಲಾದ ಲಕ್ಷ್ಮೀಕಾಂತ ಸಿ.ಸಿ.ಎಸ್, ದೇವರಾಜ ಮೊಹಲ್ಲಾದ ಕೆ.ಟಿ.ಸ್ಟ್ರೀಟ್‌ನ ರಾಮಲಿಂಗ ಚೌಡೇಶ್ವರಿ, ನಜರಬಾದ್‌ನ ಕರ್ನಾಟಕ ಲೇಡಿಸ್ ಸಿಸಿಎಸ್ ಬ್ರಾಂಚ್ ಹಾಗೂ ನಂಜನಗೂಡು ತಾಲ್ಲೂಕಿನ ಗೆಜ್ಜಿಗನಹಳ್ಳಿಯ ವಿಠ್ಠಲ ಅವರ ಪರವಾನಗಿ ರದ್ದುಗೊಳಿಸಲಾಗಿದೆ ಎಂದಿದ್ದಾರೆ.

11 ಪರವಾನಗಿ ಅಮಾನತು
ಮೈಸೂರು:
ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ 11 ಪರವಾನಗಿ ಅಮಾನತುಗೊಳಿಸಲಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತ ಬಿ.ಮಾದೇಶ್ ತಿಳಿಸಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಮೈಸೂರು ವಿಭಾಗ ವ್ಯಾಪ್ತಿಗೆ ಒಳಪಡುವ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 1577 ದಾಳಿಗಳನ್ನು ನಡೆಸಿ, 8 ಜನರನ್ನು ಬಂಧಿಸಿದ್ದು, ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT