ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ನಗರಪಾಲಿಕೆ ಮಾಜಿ ಸದಸ್ಯ, ಬಿಜೆಪಿ ಮುಖಂಡ ಎಂ.ನಾರಾಯಣಪ್ಪ ನಿಧನ

Last Updated 11 ಸೆಪ್ಟೆಂಬರ್ 2022, 15:08 IST
ಅಕ್ಷರ ಗಾತ್ರ

ಮೈಸೂರು: ನಗರಪಾಲಿಕೆ ಮಾಜಿ ಸದಸ್ಯ, ಬಿಜೆಪಿ ಮುಖಂಡರಾಗಿದ್ದ ಎಂ.ನಾರಾಯಣಪ್ಪ (82) ವಿಜಯನಗರ 1ನೇ ಹಂತದಲ್ಲಿರುವ ಸ್ವಗೃಹದಲ್ಲಿ ಭಾನುವಾರ ನಿಧನರಾದರು.

ಅವರಿಗೆ ಪತ್ನಿ, ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಇದ್ದಾರೆ.

ಅಂತ್ಯಕ್ರಿಯೆಯು ಎನ್.ಆರ್.ಮೊಹಲ್ಲಾ ರುದ್ರಭೂಮಿಯಲ್ಲಿ ಸೋಮವಾರ ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವೀರನಗೆರೆ ನಾಯಕ ಸಮಾಜದ ಮುಖಂಡರಾಗಿದ್ದರು. ಹೂವಿನ ನಾರಾಯಣಪ್ಪ ಎಂದೇ ಖ್ಯಾತರಾಗಿದ್ದರು. ವೀರನಗೆರೆ ವಾರ್ಡ್‌ನಿಂದ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ 2 ಬಾರಿ ಗೆದ್ದಿದ್ದರು. ಬಿಸಿಎಂ(ಎ) ಬದಲಿಗೆ ಎಸ್‌ಟಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಆರ್.ರವೀಂದ್ರಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು. ಸದಸ್ಯತ್ವ ರದ್ದುಗೊಳಿಸಿ ಹೈಕೋರ್ಟ್‌ ಆದೇಶ ನೀಡಿತ್ತು. ಬಳಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ರಾಜಕೀಯದಿಂದಲೂ ದೂರ ಉಳಿದಿದ್ದರು.

ದೇವರಾಜ ಮಾರುಕಟ್ಟೆಯಲ್ಲಿ ‘ಗಾಯತ್ರಿ ಪ್ಲವರ್ ಸ್ಟಾಲ್’ ನಡೆಸುತ್ತಿದ್ದರು. ವಿಜಯದಶಮಿಯಂದು ಜಂಬೂಸವಾರಿಯಲ್ಲಿ ಭಾಗವಹಿಸುವ ಅನೆಗಳಿಗೆ ಹೂವಿನ ಅಲಂಕಾರದ ಸೇವೆಯನ್ನು ಆ ಕುಟುಂಬದವರು ಮಾಡಿಕೊಂಡು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT