ಶುಕ್ರವಾರ, ಅಕ್ಟೋಬರ್ 18, 2019
20 °C
ದಸರಾ ಮಹೋತ್ಸವ ಬಹಿಷ್ಕರಿಸುವ ಬೆದರಿಕೆ

ಪಾಸ್‌ಗಾಗಿ ಮೇಯರ್‌ ಪ್ರತಿಭಟನೆ

Published:
Updated:
Prajavani

ಮೈಸೂರು: ದಸರಾ ಸಮಿತಿಯು ಕೇವಲ ಐದು ಪಾಸ್‌ ನೀಡಿ ಅವಮಾನ ಮಾಡಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯರು ಮೇಯರ್‌ ಪುಷ್ಪಲತಾ ಜಗನ್ನಾಥ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪಾಲಿಕೆ ಮುಂಭಾಗದಲ್ಲಿ ಶನಿವಾರ ರಾತ್ರಿ ಧರಣಿ ನಡೆಸಿ, ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು.

‘ಇಂಥ ಅವಮಾನ ನಮಗೆ ಎಂದೂ ಆಗಿರಲಿಲ್ಲ. ಪಾಲಿಕೆ ಸದಸ್ಯರನ್ನೇ ದಸರಾ ಸಮಿತಿ ನಿರ್ಲಕ್ಷಿಸುತ್ತಿದೆ. ಭರವಸೆ ನೀಡಿದಷ್ಟು ಪಾಸ್‌ ನೀಡದಿದ್ದರೆ ದಸರಾ ಮಹೋತ್ಸವವನ್ನು ಬಹಿಷ್ಕರಿಸುತ್ತೇವೆ’ ಎಂದು ಪುಷ್ಪಲತಾ ಬೆದರಿಕೆ ಹಾಕಿದರು.

‘ಜಂಬೂಸವಾರಿ ವೀಕ್ಷಣೆಗೆ ಕಳೆದ ಬಾರಿ 15 ಪಾಸ್‌ ನೀಡಿದ್ದರು. ಈ ಬಾರಿ 20 ಪಾಸ್ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದರು. ಆದರೆ, ಕೊಟ್ಟಿರುವುದು 5 ಪಾಸ್‌. 2 ಸಾವಿರ ಗೋಲ್ಡ್‌ ಕಾರ್ಡ್‌ ಮುದ್ರಿಸಿದ್ದು, ಅವು ಎಲ್ಲಿ ಹೋದವು? ಉಳಿಸ ಪಾಸ್‌ಗಳನ್ನು ಏನು ಮಾಡಿದರು’ ಎಂದು ಪ್ರಶ್ನಿಸಿದರು.

ಇತ್ತ ಆನ್‌ಲೈನ್‌ನಲ್ಲಿ ದಸರಾ ಮಹೋತ್ಸವದ ಗೋಲ್ಡ್‌ ಕಾರ್ಡ್‌ ಹಾಗೂ ಜಂಬೂಸವಾರಿ ಟಿಕೆಟ್‌ ಸಿಗದೆ ಸಾರ್ವಜನಿಕರು ನಿತ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಟಿಕೆಟ್‌ ಸಿಗದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Post Comments (+)