ಪಿಂಚಣಿ ಸೌಲಭ್ಯ ನೀಡುವಂತೆ ಒತ್ತಾಯ

7

ಪಿಂಚಣಿ ಸೌಲಭ್ಯ ನೀಡುವಂತೆ ಒತ್ತಾಯ

Published:
Updated:

ಮೈಸೂರು: ಖಾಸಗಿ ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳ ನೌಕರರಿಗೆ ಪಿಂಚಣಿ ಸೌಲಭ್ಯವನ್ನು ಕಡ್ಡಾಯವಾಗಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಸಿಂಡನಹಳ್ಳಿ ಡಾ.ಎಸ್‌.ಎಂ.ಶರತ್‌ಕುಮಾರ್‌ ಒತ್ತಾಯಿಸಿದರು.

ಸರ್ಕಾರಿ ಹಾಗೂ ಅನುದಾನಿತ ನೌಕರರಿಗೆ ಸಮಾನವಾಗಿ 2006ರವರೆಗೆ ಪಿಂಚಣಿ ಬರುತ್ತಿತ್ತು. ಆದರೆ, ಬಳಿಕ ಅದನ್ನು ನಿಲ್ಲಿಸಲಾಗಿದೆ. ಸರ್ಕಾರಿ ನೌಕರರಿಗೆ ಈಗ ರಾಷ್ಟ್ರೀಯ ಪಿಂಚಣಿ ಯೋಜನೆಯೂ ಅನ್ವಯಿಸುತ್ತಿದೆ. ಆದರೆ, ಖಾಸಗಿ, ಅನುದಾನಿತ ಸಂಸ್ಥೆಗಳ ನೌಕರರಿಗೆ ಅದೂ ಇಲ್ಲ. ಹೀಗಿರುವಾಗ ನಿವೃತ್ತಿಯ ಬಳಿಕ ಈ ನೌಕರರ ಜೀವನ ನಿರ್ವಹಣೆ ಹೇಗೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ವಿವಿಧ ಸಂಘಟನೆಗಳ ಮೂಲಕ ಈ ಸಂಬಂಧಿಸಿದಂತೆ ಸರ್ಕಾರಕ್ಕೆ ಸತತ ಮನವಿ ಮಾಡಿಕೊಂಡು ಬಂದರೂ ಮಲತಾಯಿ ಧೋರಣೆ ಮುಂದುವರೆದಿದೆ. ಈ ನೌಕರರು ಸೇವಾವಧಿಯಲ್ಲಿ ಮರಣ ಹೊಂದಿದರೂ ಯಾವುದೇ ಸೌಲಭ್ಯವು ನೌಕರರ ಕುಟುಂಬ ವರ್ಗಕ್ಕೆ ಸಿಗುವುದಿಲ್ಲ. ಹಾಗಾಗಿ, ನೌಕರರ ಬದುಕು ಅಕ್ಷರಶಃ ಬೀದಿಗೆ ಬೀಳುವಂತೆ ಆಗಿದೆ. ಸರ್ಕಾರವು ಸರ್ಕಾರಿ ನೌಕರರು ಹಾಗೂ ಖಾಸಗಿ, ಸರ್ಕಾರಿ ಅನುದಾನಿತ ಸಂಸ್ಥೆಗಳ ನೌಕರರನ್ನು ತಾರತಮ್ಯದಿಂದ ಕಾಣುವುದನ್ನು ಮೊದಲು ಬಿಡಬೇಕು. ಈ ಕೂಡಲೇ ಪಿಂಚಣಿ ನೀಡಲೇಬೇಕು ಎಂದು ಆಗ್ರಹಿಸಿದರು.

‘ಈ ಕುರಿತು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಒತ್ತಾಯಿಸುತ್ತಿದ್ದೇವೆ. ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ನಮಗೂ ನೀಡುವಂತೆ ಕೋರಲಿದ್ದೇವೆ’ ಎಂದು ಅವರು ಹೇಳಿದರು.

ಸಂಘದ ಗೌರವ ಕಾರ್ಯದರ್ಶಿ ಬಿ.ಕೆ.ಲೋಕೇಶ್‌, ಕಾರ್ಯದರ್ಶಿ ಬಿ.ಆರ್‌.ಶಿವಕುಮಾರ್, ಎಸ್‌.ಆರ್.ರಂಗಸ್ವಾಮಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !