13ರಿಂದ ಪಿಜಿಎಲ್‌ ಸ್ಮಾರಕ ಸಂಗೀತ ಕಾರ್ಯಕ್ರಮ

7

13ರಿಂದ ಪಿಜಿಎಲ್‌ ಸ್ಮಾರಕ ಸಂಗೀತ ಕಾರ್ಯಕ್ರಮ

Published:
Updated:
Deccan Herald

ಮೈಸೂರು: ಸಂಗೀತ ವಿದ್ವಾನ್‌ ಪಿ.ಜಿ.ಲಕ್ಷ್ಮಿನಾರಾಯಣ ಅವರ ಸಂಸ್ಮರಣೆಗಾಗಿ ಪಿಜಿಎಲ್‌ ಸಂಸ್ಮರಣ ವೇದಿಕೆಯು ಡಿ. 13, 14ರಂದು ನಾದಬ್ರಹ್ಮ ಸಂಗೀತ ಸಭಾದ ವಾಸುದೇವಾಚಾರ್ಯ ಭವನದಲ್ಲಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಡಿ. 13ರಂದು ಸಂಜೆ 6ಕ್ಕೆ ವಿದ್ವಾನರಾದ ಜಿ.ಎಸ್‌.ರಾಮಾನುಜಂ, ವಿ.ಎಸ್.ರಮೇಶ್‌, ಕಾಂಚನಾ ಈಶ್ವರ ಭಟ್, ಎ.ರಾಧೇಶ್‌, ಎಂ.ಎಲ್‌.ವಾದೀರಾಜ್ ವಾದ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪಿಟೀಲಿನಲ್ಲಿ ಸಿ.ಎನ್‌.ತ್ಯಾಗರಾಜು, ಕೊಳಲಿನಲ್ಲಿ ಸ್ಮಿತಾ ಶ್ರೀಕಿರಣ್ ಸಹಕರಿಸಲಿದ್ದಾರೆ. ಡಿ. 14ರಂದು ಸಂಜೆ 6ಕ್ಕೆ ಕರ್ನಾಟಕ ಸಂಗೀತ ಗಾಯನ ಕಾರ್ಯಕ್ರಮ ಇರಲಿದೆ. ವಿದ್ವಾನ್ ಜಿ.ಎನ್‌.ನಾಗಮಣಿ ಶ್ರೀನಾಥ್ ನಡೆಸಿಕೊಡಲಿದ್ದಾರೆ. ಪಿಟೀಲಿನಲ್ಲಿ ಎನ್‌.ಎನ್‌.ಗಣೇಶ್‌ಕುಮಾರ್, ಖಂಜಿರಾದಲ್ಲಿ ಬಿ.ಸಿ.ಮಂಜುನಾಥ್, ಸುನಾದ್ ಆನೂರ್ ಸಹಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

14ರಂದು ನೃತ್ಯರೂಪಕ

ಗಾನ ಭಾರತಿಯಲ್ಲಿ ಡಿ. 14ರಂದು ಸಂಜೆ 6ಕ್ಕೆ ವಿದ್ವಾನ್ ಬದರಿ ದಿವ್ಯಾ ಭೂಷಣ್‌ ಅವರ ತಂಡದಿಂದ ಶ್ರೀರಾಮಾನುಜ ಧನುರ್ದಾಸ ವೈಭವಂ ನೃತ್ಯರೂಪಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿದ್ವಾನ್ ಬದರಿ ದಿವ್ಯಾಭೂಷಣ್ ಅವರು ಭರತನಾಟ್ಯ ಕಲಾವಿದರಾಗಿ ಪ್ರಖ್ಯಾತರಾದವರು. ರಾಮಾಭ್ಯುದಯಂ, ಶಿವಲೀಲಾಮೃತ, ರಾಮಾನುಜ ಧನುರ್ದಾಸ ವೈಭವಂ ಇವರ ಕೆಲವು ನೃತ್ಯರೂಪಕಗಳು. ಇವರು ಏಳು ಅಂತರರಾಷ್ಟ್ರೀಯ ನೃತ್ಯೋತ್ಸವಗಳನ್ನು ಸಂಘಟಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !