ಸೋಮವಾರ, ಜೂನ್ 1, 2020
27 °C

ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ತಿ.ನರಸೀಪುರದ ಖಾಸಗಿ ಬಸ್‌ನಿಲ್ದಾಣದ ವೃತ್ತದ ಬಳಿ ಮಾರ್ಚ್ 27ರಂದು ಪೊಲೀಸ್ ವಾಹನ ಚಾಲಕ ದಯಾನಂದ ಅವರು ತಮಗೆ ಸಿಕ್ಕಿದ ₹ 50 ಸಾವಿರ ನಗದನ್ನು ಹಣ ಕಳೆದುಕೊಂಡವರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಇವರು ಹಣ ಸಿಕ್ಕಿದ ತಕ್ಷಣ ಠಾಣೆಗೆ ತಲುಪಿಸಿದರು. ನಂತರ, ತ್ರಿವೇಣಿ ನಗರದ ನಿವಾಸಿ ವಿವೇಕ್ ಎಂಬುವವರು ಹಣವನ್ನು ಕಳೆದುಕೊಂಡಿದ್ದು, ಪತ್ತೆ ಮಾಡಿ ಕೊಡುವಂತೆ ದೂರು ನೀಡಲು ಬಂದರು. ಇವರಿಗೆ ಹಣವನ್ನು ಮರಳಿಸಲಾಯಿತು.

ಹಣವನ್ನು ಪ್ರಾಮಾಣಿಕವಾಗಿ ಒಪ್ಪಿಸಿದ ದಯಾನಂದ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ₹ 5 ಸಾವಿರ ನಗದು ಬಹುಮಾನ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.