ಭಾನುವಾರ, ಜುಲೈ 25, 2021
21 °C

ಮೈಸೂರು: ಮದ್ಯದಂಗಡಿ ಮುಚ್ಚಿಸಲು ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ತಾಲ್ಲೂಕಿನ ರಮ್ಮನಹಳ್ಳಿಯಲ್ಲಿದ್ದ ಮದ್ಯದಂಗಡಿಯನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

ಕಳೆದ ಹಲವು ತಿಂಗಳುಗಳಿಂದ ಈ ಮದ್ಯದಂಗಡಿಯನ್ನು ಮುಚ್ಚಿಸಲಾಗಿತ್ತು. ಆದರೆ, ಮತ್ತೆ ಅಂಗಡಿ ತೆರೆದಿದ್ದನ್ನು ಕಂಡ ಗ್ರಾಮಸ್ಥರು ಅಂಗಡಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಮದ್ಯದಂಗಡಿಯಿಂದ ಊರಿನಲ್ಲಿ ಗಲಾಟೆಗಳು ಹೆಚ್ಚಾಗುತ್ತವೆ. ಸದ್ಯ, ಹಲವು ದಿನಗಳಿಂದ ಮದ್ಯದಂಗಡಿ ಮುಚ್ಚಿದ್ದರಿಂದ ಶಾಂತಿ ನೆಲೆಸಿತ್ತು. ಈಗ ಆ ಶಾಂತಿಯನ್ನು ಕದಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.

ಸ್ಥಳಕ್ಕೆ ಬಂದ ಪೊಲೀಸರು ತಾತ್ಕಾಲಿಕವಾಗಿ ಮದ್ಯದಂಗಡಿಯನ್ನು ಮುಚ್ಚಿಸಿ ವಿಷಯವನ್ನು ಅಬಕಾರಿ ಇಲಾಖೆಯವರಿಗೆ ಮುಟ್ಟಿಸಿದರು. ಸದ್ಯ, ಅಬಕಾರಿ ಇಲಾಖೆಯವರು ಪ್ರಕರಣವನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು