ಶುಕ್ರವಾರ, ಅಕ್ಟೋಬರ್ 23, 2020
27 °C
ಪಾಲಿಕೆ ಕೌನ್ಸಿಲ್‌ ಸಭೆ: ಪೌರಕಾರ್ಮಿಕರ ಪರ ಸದಸ್ಯರ ದನಿ‌

ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮುಂದುವರಿದ ಕೌನ್ಸಿಲ್‌ ಸಭೆಯಲ್ಲಿ ಗುರುವಾರ ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆಗಳು ಹಾಗೂ ಗುತ್ತಿಗೆದಾರರಿಗೆ ನೀಡಬೇಕಿರುವ ಬಾಕಿ ಹಣ ವಿಚಾರ ಪ್ರತಿಧ್ವನಿಸಿದವು.

ಸಭೆಯಲ್ಲಿ ಬಿ.ವಿ.ಶ್ರೀಧರ್‌ ಸೇರಿ ದಂತೆ ಹಲವು ಸದಸ್ಯರು ಗುತ್ತಿಗೆ ಪೌರ ಕಾರ್ಮಿಕರ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ಪ್ರತಿ ದಸರಾದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಇಳಿಯುತ್ತಿದ್ದಾರೆ. ಅವರಿಗೆ ನ್ಯಾಯಸಮ್ಮತ ಸೌಲಭ್ಯಗಳು ಸಿಗಬೇಕು. ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಬಳಿಕ ಗುತ್ತಿಗೆದಾರರಿಗೆ ಮೂರು ವರ್ಷಗಳಿಂದ ಪಾವತಿಸಬೇಕಿರುವ ₹ 130 ಕೋಟಿ ಬಿಡುಗಡೆ ಮಾಡುವಂತೆ ಸದಸ್ಯರು ಆಗ್ರಹಿಸಿದರು. ಬಾಕಿ ಹಣ ಬಿಡುಗಡೆ ಮಾಡುವವರೆಗೆ ಪಾಲಿಕೆಯ ಯಾವುದೇ ಕಾಮಗಾರಿ ಕೈಗೆತ್ತಿಕೊ ಳ್ಳುವುದಿಲ್ಲ ಎಂದು ಗುತ್ತಿಗೆದಾರರು ಪ್ರತಿಭಟನೆಗಿಳಿದಿರುವ ವಿಚಾರ ವನ್ನೂ ಆಯುಕ್ತರ ಗಮನಕ್ಕೆ
ತಂದರು.

ಈ ಕುರಿತು ಪ್ರತಿಕ್ರಿಯಿಸಿ, ಪಾಲಿ ಕೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಹೀಗಾಗಿ, ಈಗ ನೀಡುವುದು ಕಷ್ಟ. ಹಂತಹಂತವಾಗಿ ಬಿಡುಗಡೆ ಮಾಡ ಲಾಗುವುದು ಎಂದರು. ಈಗ ₹ 10 ಕೋಟಿಯನ್ನಾದರೂ ಬಿಡುಗಡೆ ಮಾಡು ವಂತೆ ಸದಸ್ಯರು ಪಟ್ಟು ಹಿಡಿದರು. 

ಆಗ ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್‌ ಸೇರಿದಂತೆ ಹಲವರು, ನೀರಿನ ತೆರಿಗೆ ಸಂಗ್ರಹದಲ್ಲಿ ಉಂಟಾಗು ತ್ತಿರುವ ತೆರಿಗೆ ಲೋಪದ ವಿಚಾರ ಪ್ರಸ್ತಾಪಿಸಿದರು. ನಗರಕ್ಕೆ ಕಬಿನಿ, ಕಾವೇರಿಯಿಂದ 250 ಎಂಎಲ್‌ಡಿ ನೀರು ಬರುತ್ತಿದ್ದು, ಎಷ್ಟು ತೆರಿಗೆ ಸಂಗ್ರಹ ಮಾಡಲಾಗುತ್ತಿದೆ, ಆ ಹಣ ಏನು ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಸೆಸ್‌ ಕಡಿಮೆ ಬೇಡ: ಖಾಲಿ ನಿವೇಶನ ಸ್ವಚ್ಛತೆಗೆ ವಿಧಿಸುತ್ತಿರುವ ಸೆಸ್‌ನಲ್ಲಿ ಕಡಿಮೆ ಮಾಡಬಾರದು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.