ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆದಿವಾಸಿಗಳ ಹಕ್ಕು ಘೋಷಣಾ ದಿನ’ ನಾಳೆಯಿಂದ

Last Updated 10 ಸೆಪ್ಟೆಂಬರ್ 2019, 19:46 IST
ಅಕ್ಷರ ಗಾತ್ರ

ಮೈಸೂರು: ಆದಿವಾಸಿ ಸಮನ್ವಯ ಮಂಚ್ ಹಾಗೂ ರಾಜ್ಯ ಮೂಲ ಆದಿವಾಸಿ ವೇದಿಕೆಯ ವತಿಯಿಂದ ಸೆ.12ರಿಂದ 2 ದಿನ ನಗರದಲ್ಲಿ ‘ಆದಿವಾಸಿ ಜನರ ಹಕ್ಕು ಘೋಷಣಾ ದಿನ’ ಕಾರ್ಯಕ್ರಮ ನಡೆಯಲಿದೆ.

ಮಧ್ಯಪ್ರದೇಶದ ಬುಡಕಟ್ಟು ಕಲ್ಯಾಣ ಸಚಿವ ಓಂಕಾರ ಸಿಂಗ್ ಮರ್ಕಾಮ್, ವಿಶ್ವಸಂಸ್ಥೆಯ ಆದಿವಾಸಿಗಳ ಶಾಶ್ವತ ವೇದಿಕೆಯ ಉಪಾಧ್ಯಕ್ಷ ಫೂಲ್‌ಮಾನ್ ಚೌಧರಿ, ನವದೆಹಲಿಯ ಜವಾಹರಲಾಲ್ ನೆಹರೂ ವಿ.ವಿಯ ಉಪನ್ಯಾಸಕ ಅಭಯ್ ಝಾಝಾ ಸೇರಿದಂತೆ 22 ರಾಜ್ಯಗಳ ಪರಿಣತರು ಭಾಗವಹಿಸಲಿದ್ದಾರೆ ಎಂದು ಆದಿವಾಸಿ ಸಮನ್ವಯ ಮಂಚ್‌ನ ಪ್ರಧಾನ ಕಾರ್ಯದರ್ಶಿ ಅಶೋಕ್ ಚೌಧರಿ ಮಂಗಳವಾರ ತಿಳಿಸಿದರು.

ರಾಜ್ಯದ ಆದಿವಾಸಿಗಳ ಪ್ರಮುಖ ವಿಷಯಗಳಾದ ಒಳಮೀಸಲಾತಿ, ಅರಣ್ಯ ಹಕ್ಕು ಕಾಯ್ದೆ ಹಾಗೂ ಮುಜಾಫರ್ ಅಸ್ಸಾದಿ ಅವರ ವರದಿ ಜಾರಿ ಕುರಿತು ವಿಚಾರ ಮಂಡನೆ ನಡೆಯಲಿದೆ.

13ರಂದು ನಡೆಯಲಿರುವ ಕಲಾಜಾಥಾದಲ್ಲಿ ದೇಶದ‌ 120 ಆದಿವಾಸಿ ಬುಡಕಟ್ಟು ಸಮುದಾಯದವರು ಪಾಲ್ಗೊಳ್ಳಲಿದ್ದು, ಯದುವೀರ ಕೃಷ್ಣದತ್ತಚಾಮರಾಜ ಒಡೆಯರ್ ಉದ್ಘಾಟಿಸುವರು. ಸಮಾರೋಪದಲ್ಲಿ ಪ್ರೊ.ಮುಜಾಫರ್ ಅಸ್ಸಾದಿ, ತುಮಕೂರು ವಿ.ವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಹಂಪಿ ವಿ.ವಿ ನಿವೃತ್ತ ಕುಲಪತಿ ಹಿ.ಚಿ.ಬೋರಲಿಂಗಯ್ಯ, ಶಾಸಕ ಎಸ್.ಎ.ರಾಮದಾಸ್ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT