ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಕೆ.ಲಕ್ಷ್ಮಣ್‌ ವಿಶೇಷ ಅಂಚೆ ಲಕೋಟೆ ಬಿಡುಗಡೆ

Last Updated 24 ಅಕ್ಟೋಬರ್ 2021, 20:41 IST
ಅಕ್ಷರ ಗಾತ್ರ

ಮೈಸೂರು: ಭಾರತೀಯ ಅಂಚೆ ಕರ್ನಾಟಕ ವೃತ್ತವು ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಹೊರತಂದಿರುವ ವಿಶೇಷ ಅಂಚೆ ಲಕೋಟೆ ಹಾಗೂ ಮೂರು ಪೋಸ್ಟ್‌ ಕಾರ್ಡ್‌ಗಳನ್ನು ನಗರದ ನಜರಬಾದ್‌ನ ಅಂಚೆ ತರಬೇತಿ ಕೇಂದ್ರದಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.

ವಿಶೇಷ ಅಂಚೆ ಲಕೋಟೆ ಮೇಲೆ ಆರ್‌.ಕೆ.ಲಕ್ಷ್ಮಣ್‌ ಭಾವಚಿತ್ರ, ಅವರ ‘ಸಾಮಾನ್ಯ ವ್ಯಕ್ತಿ’ಯ ವ್ಯಂಗ್ಯ ಚಿತ್ರದ ಅಂಚೆಚೀಟಿಗಳಿದ್ದು, ಇದಕ್ಕೆ ₹ 20 ದರ ನಿಗದಿಪಡಿಸಲಾಗಿದೆ. ಮೂರು ಪೋಸ್ಟ್‌ ಕಾರ್ಡ್‌ಗಳಲ್ಲಿ ಆರ್‌.ಕೆ.ಲಕ್ಷ್ಮಣ್‌ ರಚಿತ ವ್ಯಂಗ್ಯಚಿತ್ರಗಳಿವೆ. ಈ ಮೂರು ಕಾರ್ಡ್‌ಗಳಿಗೆ ₹75 ಶುಲ್ಕ ನಿಗದಿಪಡಿಸಲಾಗಿದೆ. ಇವು ಮೈಸೂರು ಪ್ರಧಾನ ಅಂಚೆ ಕಚೇರಿಯ ಅಂಚೆಚೀಟಿಗಳ ಸಂಗ್ರಹಾಲಯದಲ್ಲಿ ಖರೀದಿಗೆ ಲಭ್ಯವಿವೆ.

ಕಾರ್ಯಕ್ರಮದಲ್ಲಿ ಮೈಸೂರು ವ್ಯಂಗ್ಯಚಿತ್ರಕಾರರ ಸಂಘದ ಸಂಸ್ಥಾಪಕ ಸದಸ್ಯ ಎಂ.ವಿ.ನಾಗೇಂದ್ರ ಬಾಬು ಅವರು ಪೋಸ್ಟ್‌ ಕಾರ್ಡ್‌ ಬಿಡುಗಡೆ ಮಾಡಿದರು. ಭಾರತೀಯ ಅಂಚೆ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ಪೋಸ್ಟ್‌ಮಾಸ್ಟರ್‌ ಶಾರದಾಸಂಪತ್‌, ಅಂಚೆ ತರಬೇತಿ ಕೇಂದ್ರದ ನಿರ್ದೇಶಕ ಎಂ.ಬಿ.ಗಜಬಾಯ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT