ಹುಣಸೂರು: ತಾಲ್ಲೂಕಿನ ಬಿಳಿಕೆರೆ ಹೋಬಳಿ ದೇವಗಳ್ಳಿ ಗ್ರಾಮದ ರೈತ ಅನಿಲ್ ಗೌಡ ಅವರಿಗೆ ಸೇರಿದ ತೋಟದಲ್ಲಿ ಏಕಾಏಕಿ 7 ಜಾನುವಾರು ಸಾವನ್ನಪ್ಪಿದೆ.

‘ತೋಟದ ಕೊಟ್ಟಿಗೆಯಲ್ಲಿ ಕಟ್ಟಿದ್ದ ರಾಸುಗಳು ಒಮ್ಮೆಲೆ ಒದ್ದಾಡುವುದನ್ನು ಗಮನಿಸಿ ಕೊರಳಿಗೆ ಕಟ್ಟಿದ್ದ ಹಗ್ಗ ಕತ್ತರಿಸಿ ಬಿಟ್ಟಿದ್ದಾರೆ. ಆಗ 6 ಹಸು, ಒಂದು ಎಮ್ಮೆ ತೋಟದಲ್ಲಿ ಓಡಾಡುತ್ತಾ ಒಂದೊಂದು ಸ್ಥಳದಲ್ಲಿ ಒಂದೊಂದು ಒದ್ದಾಡಿ ಸಾವನ್ನಪ್ಪಿದವು’ ಎಂದು ರೈತ ಅನಿಲ್ ಗೌಡ ಕಣ್ಣೀರು ಹಾಕಿದರು.

‘ಸ್ಥಳಕ್ಕೆ ಬಿಳಿಕೆರೆ ಪಶುವೈದ್ಯಾಧಿಕಾರಿ ಬಂದು ಮರಣೋತ್ತರ ಪರೀಕ್ಷೆ ನಡೆಸಿ ದ್ದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಲಾಗುವುದು’ ಎಂದು ತಿಳಿಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.