ಶನಿವಾರ, ಅಕ್ಟೋಬರ್ 24, 2020
27 °C
ಗತಕಾಲದ ಗುಡ್ಡ ರಕ್ಷಿಸಿ, ಪ್ರವಾಸಿ ತಾಣವಾಗಿಸಲು ತಲಕಾಡು ಗ್ರಾಮಸ್ಥರ ಮನವಿ

ಅವಸಾನದ ಅಂಚಿನಲ್ಲಿ ಬಸವನಗುಡ್ಡ

ಟಿ.ಎಂ. ವೆಂಕಟೇಶಮೂರ್ತಿ Updated:

ಅಕ್ಷರ ಗಾತ್ರ : | |

Prajavani

ತಲಕಾಡು: ಇಲ್ಲಿನ ಪ್ರಾಚೀನವಾದ ಗಂಗರ ಕಾಲದಿಂದಲೂ ಇರುವ ಚಿಕ್ಕಬೆಟ್ಟವು ಇಂದು ಅಭಿವೃದ್ಧಿ ಕಾಣದೆ ಅವಸಾನದಂಚಿಗೆ ತಲುಪಿದೆ.

ಎರಡು ಶತಮಾನಗಳ ಕಾಲ ಹಿಂದೆ ಕಂಚಿನಗುಡ್ಡ ಎಂದೇ ಪ್ರಸಿದ್ಧಿ ಪಡೆದಿದ್ದ ಚಿಕ್ಕ ಬೆಟ್ಟ ಕಾಲಕ್ರಮೇಣ ಬಸವನ ಗುಡ್ಡವಾಗಿ ಬದಲಾವಣೆಗೊಂಡಿದೆ.

ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಇಳಿಜಾರು ಮೈದಾನ ಪ್ರದೇಶ ಹೊಂದಿರುವ ವಿವಿಧ ಜಾತಿಯ ಕಾಡು ಮರಗಳು ಗುಂಪು ಸದಾ ನೆರಳಿನಿಂದ ಆವರಿಸಿದ್ದು ಮನಸ್ಸಿಗೆ ಮುದ ನೀಡುವ ಚಿಕ್ಕ ಬೆಟ್ಟದ ತಾಣವು ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ಆಶ್ರಯ ತಾಣ, ಜೊತೆಯಲ್ಲಿ ದನ–ಕರುಗಳಿಗೂ ಮೇಯಲು ಹಾಗೂ ಹಗಲಿನಲ್ಲಿ ಆಶ್ರಯ ಪಡೆಯಲು ಉತ್ತಮ ಸ್ಥಳವಾಗಿದೆ.

ಗ್ರಾಮ ಬೆಳೆದಂತೆ ಕಂದಾಯ ಜಮೀನುಗಳು, ಹೊಸ ಬಡಾವಣೆಗಳು ಹುಟ್ಟಿಕೊಂಡು ಬಸವನಗುಡ್ಡ ಒತ್ತುವರಿಯಾಗಿ ಅನ್ಯರ ಪಾಲಾಗುತ್ತಿದೆ. ಇದರ ಜೊತೆಯಲ್ಲಿ ಬೆಟ್ಟದ ಮೇಲಿದ್ದ ಕಲ್ಲು, ಮರಗಳು ನಾಶವಾಗಿ ಇಂದು ಪಾಳು ಗುಡ್ಡದಂತಾಗಿದೆ.

ಈ ಪ್ರಾಚೀನ ಗುಡ್ಡವನ್ನು ರಕ್ಷಿಸಲು ಸರ್ಕಾರದಿಂದಾಗಲಿ, ಸಾರ್ವಜನಿಕರಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಮುಂದಾಗಿಲ್ಲ. ಪ್ರಾಚೀನ ಗುಡ್ಡವನ್ನು ರಕ್ಷಿಸಿದರೆ, ಪರಿಸರವೂ ಉಳಿದು ದನ– ಕರುಗಳಿಗೆ ಮೇವು, ಹೊಸಪೀಳಿಗೆಗೆ ಗುಡ್ಡದ ಮಹತ್ವ ಅರಿಯಲು ಸಹಾಯವಾಗುವುದು. ಇದರೊಂದಿಗೆ ಗುಡ್ಡದಲ್ಲಿ ಆಧ್ಯಾತ್ಮಿಕ ಕೇಂದ್ರ ತೆರೆಯುವಂತೆ   ಗ್ರಾಮಸ್ಥರಾದ ಶ್ರೀನಿವಾಸರಾವ್ ಗೋವಿಂದು, ವಿಜಯಭಾಸ್ಕರ್, ಯಜಮಾನ್ ನರಸಿಂಹಣ್ಣ, ರಂಗಸ್ವಾಮಿ, ಪ್ರಮೋದ್, ನಾಗರಾಜ್ ಹಾಗೂ ಹಳೇಬೀಡು ಮಾದೇಶ್ ಅವರ ಅಭಿಪ್ರಾಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.