ಸೋಮವಾರ, ಜನವರಿ 18, 2021
27 °C
ಸಾರ್ವಜನಿಕರ ಕುಂದು ಕೊರತೆ ನಿವಾರಣೆಗೆ ಜಿಲ್ಲಾಧಿಕಾರಿ ಉಪಕ್ರಮ

26ರಿಂದ ವಿವಿಧೆಡೆ ‘ಸ್ಪಂದನ’ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ‘ಸ್ಪಂದನ’ ಕಾರ್ಯಕ್ರಮ ಪ್ರಾರಂಭಿಸಲು ನಿರ್ಧರಿಸಿದ್ದಾರೆ.

ಸಾರ್ವಜನಿಕರು ಅವರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಿಂದ ಕಚೇರಿಗಳಿಗೆ ಬರುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಜನರ ಬಳಿಗೆ ತೆರಳಿ ಮನವಿಗಳನ್ನು ಸ್ವೀಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರಿಂದ ಸ್ವೀಕರಿಸುವ ಕುಂದುಕೊರತೆ ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲು ಅವಕಾಶವಿದ್ದಲ್ಲಿ ಇತ್ಯರ್ಥಪಡಿಸಲಾಗುತ್ತದೆ. ಸ್ಥಳದಲ್ಲಿ ಇತ್ಯರ್ಥಪಡಿಸಲು ಅವಕಾಶವಿಲ್ಲದಿದ್ದಲ್ಲಿ ಸ್ಪಂದನ ತಂತ್ರಾಂಶದ ಮೂಲಕ ಅರ್ಜಿಗಳನ್ನು ಪಡೆದು ಅವುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಕ್ರಮವಹಿಸ ಲಾಗು ವುದು ಎಂದಿದ್ದಾರೆ.

ಸಾರ್ವಜನಿಕರ ಕುಂದು ಕೊರತೆಗಳ ಸಂಬಂಧ ಮೈಸೂರು ಜಿಲ್ಲಾ ವೆಬ್‍ಸೈಟ್ mysore.nic.in ನಲ್ಲಿ ಇರುವ ಸ್ಪಂದನ ತಂತ್ರಾಂಶದಲ್ಲೂ ಕುಂದು ಕೊರತೆ ಅರ್ಜಿಗಳನ್ನು ಅಪ್‍ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಸ್ಪಂದನ ತಂತ್ರಾಂಶದಲ್ಲಿ ನಮೂದಾಗು ವಂತಹ ಕುಂದುಕೊರತೆ ಅರ್ಜಿಗಳನ್ನು ಆಯಾಯ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇತ್ಯರ್ಥ ಪಡಿಸಲು ಕ್ರಮ ತೆಗೆದುಕೊಂಡು ಅರ್ಜಿದಾರರಿಗೆ ಮಾಹಿತಿ ನೀಡುವರು. ಜಿಲ್ಲಾಧಿಕಾರಿ ವೈಯಕ್ತಿವಾಗಿ ಎಲ್ಲಾ ಅರ್ಜಿಗಳ ಸ್ಥಿತಿಯನ್ನು ಹಾಗೂ ವಿಲೇವಾರಿಯನ್ನು ಗಮನಿಸುವುದರಿಂದ ಸಾರ್ವಜನಿಕರ ಕುಂದುಕೊರತೆಗಳನ್ನು ಕಾನೂನಿನ ಅನ್ವಯವೇ ಇತ್ಯರ್ಥ ಪಡಿಸಲು ಅವಕಾಶವಿರುತ್ತದೆ.

ಕಾರ್ಯಕ್ರಮದ ವಿವರ: ಸ್ಪಂದನ ಕಾರ್ಯಕ್ರಮ ನ.26 ರಂದು ಬೆಳಿಗ್ಗೆ 10.30ಕ್ಕೆ ನಂಜನಗೂಡಿನ ಡಾ.ಅಂಬೇಡ್ಕರ್ ಭವನ, ಮಧ್ಯಾಹ್ನ2.30 ಕ್ಕೆ ತಿ.ನರಸೀಪುರದ ಡಾ.ಅಂಬೇಡ್ಕರ್ ಭವನ, ನ.27 ರಂದು ಬೆಳಿಗ್ಗೆ 10.30 ಕ್ಕೆ ಮೈಸೂರು ತಾಲ್ಲೂಕಿನ ಗುಂಗ್ರಾಲ್ ಛತ್ರ, ಮಧ್ಯಾಹ್ನ 2.30ಕ್ಕೆ ಕೆ.ಆರ್.ನಗರದ ಶಿಕ್ಷಕರ ಭವನ, ನ.30 ರಂದು ಬೆಳಿಗ್ಗೆ 10.30ಕ್ಕೆ ಹುಣಸೂರಿನ ಡಾ.ಅಂಬೇಡ್ಕರ್ ಭವನ, ಮಧ್ಯಾಹ್ನ 2.30ಕ್ಕೆ ಪಿರಿಯಾಪಟ್ಟಣದ ಸುವರ್ಣ ಸೌಧ, ತಾಲ್ಲೂಕು ಪಂಚಾಯಿತಿ, ಡಿ.1 ರಂದು ಸರಗೂರು ಹಾಗೂ ಎಚ್.ಡಿ. ಕೋಟೆಗೆ ಸಂಬಂಧಿಸಿದಂತೆ ಬೆಳಿಗ್ಗೆ 10.30ಕ್ಕೆ ಎಚ್.ಡಿ.ಕೋಟೆಯ ಡಾ.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು