ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸು ಸಮುದಾಯಕ್ಕೆ ದೇಣಿಗೆ ನೀಡಿರಿ: ಅಮೆರಿಕ ಉದ್ಯಮಿ ಡಾ.ಬಿ.ಎನ್‌.ಬಹದ್ದೂರ್ ಮನವಿ

Last Updated 17 ಡಿಸೆಂಬರ್ 2018, 12:37 IST
ಅಕ್ಷರ ಗಾತ್ರ

ಮೈಸೂರು: ಅರಸು ಮನೆತನಕ್ಕೆ ಸೇರಿದ ಅನೇಕರು ವಿದೇಶಗಳಲ್ಲಿ ಉತ್ತಮ ಸ್ಥಾನಗಳಲ್ಲಿ ನೆಲೆಸಿದ್ದು, ಧನಸಹಾಯ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ತುಡಿಯಬೇಕು ಎಂದು ಅರಸು ಸಮುದಾಯದ ಉದ್ಯಮಿ ಅಮೆರಿಕದ ಡಾ.ಬಿ.ಎನ್‌.ಬಹದ್ದೂರ್ ಮನವಿ ಮಾಡಿದರು.

ಶ್ರೀರಾಮ ಸೇವಾ ಅರಸು ಮಂಡಳಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನಂಜರಾಜ ಬಹದ್ದೂರ್ ಎಜುಕೇಷನ್ ಛಾರಿಟಿ ಅಂಡ್ ಬೋರ್ಡಿಂಗ್ ಹೋಂ ಮತ್ತು ಶ್ರೀರಾಮ ಸೇವಾ ಅರಸು ಮಂಡಳಿಯ ಶತಮಾನೋತ್ಸವದ ಸಂಭ್ರಮ ಸಮಾರಂಭದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

‘ಅರಸು ಸಮುದಾಯವು ಈಗ ಆರ್ಥಿಕವಾಗಿ ಸಬಲಗೊಂಡಿದೆ. ಹಿಂದೆ ಸರ್ಕಾರದಿಂದ ರಾಜಧನ ಬರುವುದು ಸ್ಥಗಿತಗೊಂಡಾಗ ನಾವು ಕಷ್ಟಬಡಬೇಕಾಗಿತ್ತು. ಇದರಿಂದ ನಮಗೆ ಸಿಗುತ್ತಿದ್ದ ಗೌರವವೂ ಕಡಿಮೆಯಾಗಿತ್ತು. ಈಗ ಕಠಿಣ ಪರಿಶ್ರಮದಿಂದ ನಾವು ಬಲಗೊಂಡಿದ್ದೇವೆ. ನಾವು ಸಮಾಜಕ್ಕೂ ಕಾಣಿಕೆ ಕೊಡುತ್ತಿದ್ದೇವೆ. ನಂಜರಾಜ ಬಹದ್ದೂರ್ ಎಜುಕೇಷನ್ ಛಾರಿಟಿ ಅಂಡ್ ಬೋರ್ಡಿಂಗ್ ಹೋಂ ಮೂಲಕ ಧನಸಹಾಯ ಮತ್ತು ವಿದ್ಯಾರ್ಥಿವೇತನ ಪಡೆದ ಹಲವರು ಈಗ ವಿದೇಶಗಳಲ್ಲಿ ನೆಲೆಸಿದ್ದಾರೆ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಆಸ್ಟ್ರಿಯಾ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಅವರೆಲ್ಲಾ ಈಗ ಈ ಸಂಸ್ಥೆಗೆ ಧನಸಹಾಯ ಮಾಡಬೇಕು. ನಮ್ಮ ಕುಟುಂಬದಿಂದ ₹ 50 ಲಕ್ಷ ದೇಣಿಗೆ ನೀಡುತ್ತಿದ್ದೇವೆ’ ಎಂದು ಹೇಳಿದರು.

ಸಂಸ್ಥೆಯ ಆವರಣದಲ್ಲಿ ನಿರ್ಮಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಯನ್ನು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುತ್ಥಳಿ ಅನಾವರಣಗೊಳಿಸಿದರು. ಪ್ರಿನ್ಸ್ ನಂಜರಾಜ ಬಹದ್ದೂರ್ ಪುತ್ಥಳಿಯನ್ನು ಡಾ.ಬಿ.ಎನ್.ಬಹದ್ದೂರ್, ಲಿಂಗಾಜಮ್ಮಣ್ಣಿ ಅವರ ಪುತ್ಥಳಿಯನ್ನು ರಾಣಿ ದಾಕ್ಷಾಯಣಿ ಬಹದ್ದೂರ್ ಅನಾವರಣಗೊಳಿಸಿದರು.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಮಾರಂಭ ಉದ್ಘಾಟಿಸಿ ಮಾತನಾಡಿರು. ಮಂಟೇಸ್ವಾಮಿ ಮಠದ ವರ್ಚಸ್ವಿ ಸಿದ್ದಲಿಂಗರಾಜೇ ಅರಸ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಶ್ರೀರಾಮ ಸೇವಾ ಅರಸು ಮಂಡಳಿಯ ಅಧ್ಯಕ್ಷ ಲಕ್ಷ್ಮಿಕಾಂತ ರಾಜೇ ಅರಸ್ ಭಾಗವಹಿಸಿದ್ದರು.

ಮೆರವಣಿಗೆ:

ಇದಕ್ಕೂ ಮುನ್ನ ನಗರದ ಫೈವ್‌ಲೈಟ್‌ ವೃತ್ತದಿಂದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು. ಪೂರ್ಣಕುಂಭ ಕಳಶ, ಪುರೋಹಿತರು, ವಾದ್ಯಗೋಷ್ಠಿ, ವೀರಭದ್ರ ಕುಣಿತ, ಕಂಸಾಳೆ ನೃತ್ಯ, ಪೊಲೀಸ್ ಬ್ಯಾಂಡ್‌ನೊಂದಿಗ ಸಾರೋಟಿನಲ್ಲಿ ಅತಿಥಿಗಳನ್ನು ಕರೆತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT