ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಮಾನವ ಸಂಪನ್ಮೂಲಕ್ಕೆ ಆದ್ಯತೆ

ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿದ ಅಶ್ವತ್ಥನಾರಾಯಣ
Last Updated 25 ಜನವರಿ 2021, 14:46 IST
ಅಕ್ಷರ ಗಾತ್ರ

ಮೈಸೂರು: ಐಟಿಐಗಳಲ್ಲಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕಿದೆ. ಈ ಮೂಲಕ ಗುಣಮಟ್ಟದ ಮಾನವ ಸಂಪನ್ಮೂಲವನ್ನು ಕೈಗಾರಿಕೆಗಳಿಗೆ ಒದಗಿಸಲು ಸಾಧ್ಯ ಎಂದು ಎಂದು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಇಲ್ಲಿ ಹೇಳಿದರು.

ಬೋಗಾದಿಯಲ್ಲಿ ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ ಐಟಿಐಗಳಲ್ಲಿ ಒಟ್ಟು 80 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇದೆ. ಐಟಿಐಗಳಲ್ಲಿ ಮೂಲಸೌಕರ್ಯದ ಕೊರತೆಯೂ ಇದೆ. ದೇಶದಲ್ಲಿ ಸುಧಾರಣೆ, ಕ್ರಾಂತಿ ಆಗಲು ಐಟಿಐಗಳು ಬಹು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.

ಯಾವುದೇ ಸಂಸ್ಥೆಯ ಏಳಿಗೆಗೆ ಹಳೆ ವಿದ್ಯಾರ್ಥಿಗಳೂ ನೆರವಾಗಬೇಕು. ಸಂಸ್ಥೆಯ ದಾನಿಗಳು ನಿಸ್ವಾರ್ಥ ಸೇವೆ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಬದುಕು ಸಾರ್ಥಕವಾಗಲು ಎಲ್ಲವನ್ನೂ ಸಮಾಜಕ್ಕೆ ಅರ್ಪಣೆ ಮಾಡಬೇಕು. ಆಸ್ತಿ, ಹಣ ಪ್ರಮುಖವಲ್ಲ. ಸಮಾಜ ಪ್ರಮುಖ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಶ್ಲಾಘಿಸಿದ ಅವರು, ಸಂಸ್ಥೆಯ ಬೆಳವಣಿಗೆಗೆ ನೆರವು ಒದಗಿಸುವ ಭರವಸೆ ನೀಡಿದರು.

ವಿದ್ಯಾರ್ಥಿಗಳು ಐಟಿಐಗೆ ಸೇರುವುದು ಹೆಮ್ಮೆಯ ವಿಷಯ. ಸಮಾಜಕ್ಕೆ ಬೇಕಾದ ಎಲ್ಲ ರೀತಿಯ ಅವಶ್ಯಕತೆ ಪೂರೈಸುವವರು ಐಟಿಐ ವಿದ್ಯಾರ್ಥಿಗಳೇ ಆಗಿದ್ದಾರೆ. ಗುಣಮಟ್ಟಕ್ಕೆ ಒತ್ತು ನೀಡಿದಾಗ ಯುರೋಪ್‌ ದೇಶಗಳಂತೆ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದು ಅವರು ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು.

ದಾನಿಗಳಾದ ಜಿ.ಎಲ್‌.ನಾರಾಯಣ್‌, ಸುಶೀಲಾ ನಾರಾಯಣ್‌, ಡಾ.ಶಾರದಾ ಸೋಮಶೇಖರ್‌, ಡಾ.ಕೆ.ಶಿವಶಂಕರ್‌, ಎಂ.ಎನ್‌.ಶಿವರಾಂ ಮಳವಳ್ಳಿ, ಕೆ.ಎ.ವಿಜಯರಂಗನ್‌, ಎಂ.ಎ.ರಾಧಾಕೃಷ್ಣ, ಎಂ.ಡಿ.ವಾಸುಕಿ, ಪಭಾ ನಾಗೇಂದ್ರನ್‌, ಮಮತಾ ಶಂಕರ್‌, ಡಾ.ವಿನುತಾಶಂಕರ್‌, ಗೀತಾಶಂಕರ್‌, ಬಿ.ಕೆ.ಅಚ್ಯುತ, ಎಂಜಿನಿಯರ್‌ ಕಿಶೋರ್‌ಚಂದ್ರ, ಗುತ್ತಿಗೆದಾರ ಬಾಬು, ಎಂ.ಎಸ್‌.ಉಮೇಶ್‌, ನಾಗೇಂದ್ರ ಮೊದಲಾದವರನ್ನು ಗೌರವಿಸಲಾಯಿತು.

ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ, ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್‌, ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾಲಯದ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌, ವಿಶ್ವೇಶ್ವರಯ್ಯ ಎಜುಕೇಷನಲ್‌ ಟ್ರಸ್ಟ್‌ ಅಧ್ಯಕ್ಷ ಕೆ.ಎ.ನಾಗಪ್ರಸಾದ್‌, ಧರ್ಮದರ್ಶಿಗಳು ಭಾಗವಹಿಸಿದ್ದರು.

ಮಾನಸ ಜಿ.ಎ.ಅರಸ್‌ ಪ್ರಾರ್ಥಿಸಿದರು. ಧರ್ಮದರ್ಶಿ ನಂ.ಶ್ರೀಕಂಠಕುಮಾರ್‌ ಸ್ವಾಗತಿಸಿದರು. ಆಡಳಿತಾಧಿಕಾರಿ ಎಚ್‌.ಎ.ಪ್ರಭಾಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಡಾ.ಸಿ.ತೇಜೋವತಿ ನಿರೂಪಿಸಿ, ಧರ್ಮದರ್ಶಿ ಎಚ್‌.ಎಸ್‌.ಪ್ರಾಣೇಶ್‌ರಾವ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT