ಇಳಿದ ತರಕಾರಿ, ಮಾಂಸ, ಮೊಟ್ಟೆ ದುಬಾರಿ

7
ಬೀನ್ಸ್ ಬೆಲೆಯಲ್ಲಿ ಭಾರಿ ಕುಸಿತ, ಕಡಿಮೆಯಾದ ನುಗ್ಗೆ, ಹೀರೆ ಬೆಲೆ

ಇಳಿದ ತರಕಾರಿ, ಮಾಂಸ, ಮೊಟ್ಟೆ ದುಬಾರಿ

Published:
Updated:
Deccan Herald

ಮೈಸೂರು: ಕಾರ್ತಿಕ ಮಾಸ ಮುಗಿದು ಶೂನ್ಯ ಮಾಸ ಬರುತ್ತಿದ್ದಂತೆ ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿ ಬೆಲೆ ಇಳಿಕೆಯತ್ತ ಮುಖ ಮಾಡಿದ್ದರೆ, ಮಾಂಸ, ಕೋಳಿ ಮಾಂಸ ಮತ್ತು ಮೊಟ್ಟೆ ಬೆಲೆಗಳು ಏರಿಕೆಯಾಗಿವೆ.

ಕಾರ್ತಿಕ ಮಾಸ ಆರಂಭವಾದ ನಂತರ ಸರಿಸುಮಾರು ಒಂದು ತಿಂಗಳಿನಿಂದ ಸಾಮಾನ್ಯವಾಗಿ ಬಹಳಷ್ಟು ಮಂದಿ ಮಾಂಸ ಸೇವನೆ ಮಾಡಿರಲಿಲ್ಲ. ಕಳೆದೊಂದು ವಾರದಿಂದ ಮಾಂಸ ಸೇವನೆ ಆರಂಭವಾಗಿದೆ. ಬೇಡಿಕೆ ಹೆಚ್ಚುತ್ತಲೇ ಇರುವುದರಿಂದ ಮೊಟ್ಟೆ ಮತ್ತು ಮಾಂಸದ ಧಾರಣೆಯಲ್ಲಿ ಏರಿಕೆ ಉಂಟಾಗಿದೆ.

‘ಸಾಮಾನ್ಯವಾಗಿ ಮನೆಗಳಲ್ಲಿ ಮಾಂಸದಡುಗೆ ಮಾಡಿದ ನಂತರ ತರಕಾರಿಗಳನ್ನು ಬಳಸುವುದು ಕಡಿಮೆ. ಬಹಳಷ್ಟು ಮಂದಿ ಕನಿಷ್ಠ ಎಂದರೂ ವಾರಕ್ಕೆ 3 ಇಲ್ಲವೇ 2 ದಿನಗಳ ಕಾಲ ಮಾಂಸದ ಸಾಂಬರು ಮಾಡುತ್ತಾರೆ. ಒಂದು ತಿಂಗಳ ಬಿಡುವು ಇದ್ದುದರಿಂದ ಸಹಜವಾಗಿಯೇ ಮೊದಲ ಎರಡು ವಾರಗಳ ಕಾಲ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ’ ಎಂದು ಮಾಂಸ ಮಾರಾಟ ಮಾಡುವ ಅಂಗಡಿಯೊಂದರ ಮಾಲೀಕ ಅಬ್ದುಲ್ಲಾ ಹೇಳುತ್ತಾರೆ.

‘ಭಾನುವಾರ ಬೆಳಿಗ್ಗೆ ಅಗ್ರಹಾರದಲ್ಲಿರುವ ಮಾಂಸದ ಮಾರುಕಟ್ಟೆಯಲ್ಲಿ ಜನರು ಮಾಂಸ ಖರೀದಿಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಇದರಿಂದ ಸಂಜೆ ವೇಳೆಗೆ ವಡೆ, ಬಜ್ಜಿ, ಬೋಂಡಾಗಳು ಕೊಳ್ಳುವವರಿಲ್ಲದೇ ಎಸೆಯಬೇಕಾಯಿತು’ ಎಂದು ಅಗ್ರಹಾರದ ಬೋಂಡಾ ವ್ಯಾಪಾರಿ ಮಲ್ಲಿಕಾರ್ಜುನ ತಿಳಿಸಿದರು.

ಮಾಂಸದ ಬೆಲೆಗಳು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಹೆಚ್ಚಳವಾಗಿದೆ. ಕನಿಷ್ಠ ಎಂದರೂ ಕೆ.ಜಿ.ಮಾಂಸ ₹ 440 ಇದ್ದದ್ದು ಭಾನುವಾರ ₹ 460ಕ್ಕೆ ಹೆಚ್ಚಾಗಿತ್ತು.

ಕೋಳಿ ಮಾಂಸಕ್ಕೆ ಬಹು ಬೇಡಿಕೆ:

ಒಂದೆಡೆ ಮಾಂಸದ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದರೆ ಮತ್ತೊಂದೆಡೆ ಕೋಳಿ ಮಾಂಸದ ಬೆಲೆ ತೀವ್ರಗತಿಯಲ್ಲೇ ಹೆಚ್ಚಾಗಿದೆ. ಕರ್ನಾಟಕ ಪೌಲ್ಡ್ರಿ ಫಾರ್ಮಸ್ ಅಂಡ್ ಬ್ರೀಡರ್ಸ್ ಅಸೋಸಿಯೇಷನ್‌ನ ಬ್ರಾಯ್ಲರ್ ಕೋಳಿ ಮಾಂಸದ ಬೆಲೆ ಒಂದು ಕೆ.ಜಿಗೆ ಕಳೆದ ಸೋಮವಾರ ₹ 81 ಇತ್ತು. ಈಗ ಇದು ₹ 90 ಆಗಿದೆ. ಸಗಟು ಬೆಲೆಯಲ್ಲಿ ಒಟ್ಟು ₹ 9ರಷ್ಟು ಏರಿಕೆ ಕಂಡು ಬಂದಿದೆ. ಆದರೆ, ಪ್ರೇರೇಂಟ್ ಬ್ರಾಯ್ಲರ್ ಕೋಳಿ ಮಾಂಸದ ದರ ಕೆ.ಜಿಗೆ ₹ 80ರಲ್ಲೇ ಮುಂದುವರಿದಿದೆ.‌

 **

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ; 10; 10

ಬೀನ್ಸ್ ; 28; 18

ಕ್ಯಾರೇಟ್; 25; 22

ಎಲೆಕೋಸು; 05;06

ದಪ್ಪಮೆಣಸಿನಕಾಯಿ; 17;20

ಬದನೆ ; 06;07

ನುಗ್ಗೆಕಾಯಿ; 50; 40

ಹಸಿಮೆಣಸಿನಕಾಯಿ; 20; 25

ಈರುಳ್ಳಿ; 14; 12

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !