ಶುಕ್ರವಾರ, ಸೆಪ್ಟೆಂಬರ್ 24, 2021
26 °C

ಮಧ್ಯಾಹ್ನದ ನಂತರ ವಾಹನ ಸಂಚಾರ ವಿರಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಾರಾಂತ್ಯ ಲಾಕ್‌ಡೌನ್‌ ಪ್ರಯುಕ್ತ ಶನಿವಾರ ಮಧ್ಯಾಹ್ನದವರೆಗೂ ವಾಹನ ಸಂಚಾರ ಇತ್ತು. ಮಧ್ಯಾಹ್ನ ಬಳಿಕ ರಸ್ತೆಗಳು ಭಣಗುಡಲಾರಂಭಿಸಿದವು. ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ 39 ದ್ವಿಚಕ್ರ ವಾಹನಗಳು ಹಾಗೂ 11 ಸೇರಿದಂತೆ 50 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಿನಸಿ ಅಂಗಡಿಗಳು ಮಧ್ಯಾಹ್ನದವರೆಗೆ ತೆರೆದಿದ್ದವು. ಮಧ್ಯಾಹ್ನದ ಬಳಿಕ ಅವೂ ಬಾಗಿಲು ಮುಚ್ಚಿದವು. ಇದರಿಂದ ಎಲ್ಲ ರಸ್ತೆಗಳ ಅಂಗಡಿಗಳು ಸ್ತಬ್ದಗೊಂಡವು.

ನಗರ, ಗ್ರಾಮಾಂತರ ಸಾರಿಗೆ ಬಸ್‌ಗಳ ಸಂಚಾರವೂ ಕಡಿಮೆ ಇತ್ತು. ಆಟೊಗಳಿಗೂ ಸಾರ್ವಜನಿಕರಿಂದ ಬೇಡಿಕೆ ಇರಲಿಲ್ಲ.

ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಯಷ್ಟೇ ಇತ್ತು. ಶ್ರಾವಣ ಶನಿವಾರವಾಗಿರುವುದರಿಂದ ಪ್ರಮುಖ ದೇವಾಲಯಗಳನ್ನು ಮುಚ್ಚಲಾಗಿತ್ತು. ಇದರಿಂದ ಜನಸಂಚಾರ ವಿರಳವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.