ಮಂಗಳವಾರ, ಸೆಪ್ಟೆಂಬರ್ 28, 2021
25 °C
ನಟರಾದ ಗಣೇಶ್, ರವಿಶಂಕರ್ ಗೌಡ, ಜಗದೀಶ್, ರಾಜುಗೌಡ ಭೇಟಿ

ದಮ್ಮನಕಟ್ಟೆ (ಕಾಕನಕೋಟೆ) ಸಫಾರಿ ಕೇಂದ್ರಕ್ಕೆ ಪ್ರವಾಸಿಗರ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ತಾಲ್ಲೂಕಿನ ಅಂತರಸಂತೆ ದಮ್ಮನಕಟ್ಟೆ (ಕಾಕನಕೋಟೆ) ಸಫಾರಿ ಕೇಂದ್ರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಚಲನಚಿತ್ರ ನಟರು, ಉದ್ಯಮಿಗಳು, ರಾಜಕೀಯ ಮುಖಂಡರು, ಉನ್ನತ ಅಧಿಕಾರಿಗಳು ಕುಟುಂಬ ಸಮೇತ ಲಗ್ಗೆ ಇಡುತ್ತಿದ್ದಾರೆ.

ಚಲನಚಿತ್ರ ನಟ ಗಣೇಶ್, ಹಾಸ್ಯನಟರಾದ ರವಿಶಂಕರ್ ಗೌಡ, ಜಗದೀಶ್, ಸುರಪುರ ಕ್ಷೇತ್ರದ ಶಾಸಕ ರಾಜುಗೌಡ ಅವರು ಭೇಟಿ ನೀಡಿದ್ದರು. ಸಫಾರಿ ವೇಳೆ ಕಂಡ ವಿವಿಧ ಪ್ರಾಣಿಗಳ ಚಿತ್ರಗಳನ್ನು ಸೆರೆಹಿಡಿದು ಸಂತಸಪಟ್ಟರು. ರಾಜುಗೌಡ ನಾಯಕ್ ಅವರು ಕ್ಯಾಮೆರಾ ಬಳಸಿ ಛಾಯಾಚಿತ್ರಗಳನ್ನು ಸೆರೆ ಹಿಡಿದರು. ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಂಗಲ್‌ ಲಾಡ್ಜಸ್‌ ಅಂಡ ರೆಸಾರ್ಟ್‌ ನಿಗಮದ ಅಧ್ಯಕ್ಷ ಅಪ್ಪಣ್ಣ ಸಫಾರಿ ಮಾಡಿದ್ದರು.

‘ವನ್ಯಸಂಪತ್ತನ್ನು ಎಲ್ಲರೂ ಸಂರಕ್ಷಿಸಬೇಕು. ಕಾಡು ನಾಶದಿಂದ ಮನುಕುಲ ನಾಶವಾಗುತ್ತದೆ’ ಎಂದು ರಾಜುಗೌಡ ಹೇಳಿದರು.

‘ಸಫಾರಿ ಅದ್ಭುತ ಅನುಭವ ಕೊಟ್ಟಿತು. ಬಹಳ ಹತ್ತಿರದಿಂದ ಚಿರತೆ, ಹುಲಿ, ಆನೆ ಮತ್ತು ಇತರೆ ವನ್ಯಜೀವಿಗಳನ್ನು ನೋಡಿ ಖುಷಿಯಾಗಿದೆ’ ಎಂದು ನಟ ಗಣೇಶ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು