ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಹಂತದ ಕುಡಿಯುವ ನೀರು ಪೂರೈಕೆ

ಯೋಜನೆಗೆ ಡಾ.ಯತೀಂದ್ರ ಸಿದ್ದರಾಮಯ್ಯ ಚಾಲನೆ
Last Updated 9 ಜೂನ್ 2019, 20:13 IST
ಅಕ್ಷರ ಗಾತ್ರ

ತಿ.ನರಸೀಪುರ: ಪಟ್ಟಣಕ್ಕೆ ಕಾವೇರಿ ನದಿಮೂಲದಿಂದ ನೀರು ಸರಬರಾಜು ಮಾಡುವ 3ನೇ ಹಂತದ ಕಾಮಗಾರಿಗೆ ತ್ರಿವೇಣಿ ನಗರದ ಬಳಿ ಇರುವ ಜಲ ಶುದ್ಧೀಕರಣ ಕೇಂದ್ರದ ಆವರಣದಲ್ಲಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಕಾವೇರಿ ನದಿ ತೀರದಲ್ಲಿ ಜಾಕ್‌ವೆಲ್ ನಿರ್ಮಿಸಿ ಶುದ್ಧೀಕರಣ ಘಟಕದ ಆವರಣದಲ್ಲಿ 15 ಲಕ್ಷ ಲೀಟರ್ ಮತ್ತು ಹೆಳವರಹುಂಡಿಯಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು. 98 ಕಿ.ಮೀ. ಉದ್ದದ ವಿವಿಧ ವ್ಯಾಸದ ನೀರು ಸರಬರಾಜು ವಿತರಣಾ ಪೈಪ್‌ಗಳನ್ನು ಅಳವಡಿಸಲಾಗುತ್ತದೆ. ಕಾಮಗಾರಿಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಗಡುವು ವಿಧಿಸಲಾಗಿದೆ. 5 ವರ್ಷ ಗಳವರೆಗೆ ಇದರ ನಿರ್ವಹಣೆಯನ್ನು ಗುತ್ತಿಗೆದಾರರೇ ನೋಡಿಕೊಳ್ಳಬೇಕು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಮಂಜುನಾಥ್ ತಿಳಿಸಿದರು.

ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ನೀರಿನ ಸಂರಕ್ಷಣೆಗಾಗಿ ಪಟ್ಟಣದ ನಿವಾಸಿಗಳು ತಮ್ಮ ಮನೆಗಳಲ್ಲಿ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಬೇಕು. ತಾಪಮಾನ ಹೆಚ್ಚಾದರೆ ಕುಡಿಯುವ ನೀರಿನ ಸಮಸ್ಯೆ ಕಾಣಿಕೊಳ್ಳುತ್ತದೆ. ಬರ ಆವರಿಸುತ್ತದೆ. ಹೀಗಾಗಿ, ಮಳೆ ನೀರನ್ನು ಸಂಗ್ರಹಿಸಿ, ಶುದ್ಧೀಕರಿಸಿ ಬಳಸಬೇಕು. ಇಂಗುಗುಂಡಿಗಳನ್ನು ಮಾಡಿ ಮಳೆನೀರನ್ನು ಇಂಗಿಸಬೇಕು’ ಎಂದು ಸಲಹೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಎಚ್.ಆರ್.ಗಂಗಾಧರ, ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ, ಎಸ್.ಕೆ.ಕಿರಣ, ಎನ್.ಸೋಮು, ಬಾದಾಮಿ ಮಂಜು, ಎಸ್.ಮದನ್‌ರಾಜ್, ಆರ್.ನಾಗರಾಜು, ಬಿ.ಬೇಬಿ ಹೇಮಂತ್‌ಕುಮಾರ್, ಸಿದ್ದು, ಎಲ್.ಮಂಜುನಾಥ್, ರೂಪಶ್ರೀ ಪರಮೇಶ್, ವಸಂತಾ ಶ್ರೀಕಂಠ, ಮಾಜಿ ಸದಸ್ಯ ಮಲ್ಲೇಶ, ಯೋಜನಾಧಿಕಾರಿ ಕೆಂಪರಾಜು, ಆರೋಗ್ಯಾಧಿಕಾರಿ ಚೇತನ್‌ಕುಮಾರ್, ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ರಮೇಶ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧೀಕ್ಷಕ ಎಂಜಿನಿಯರ್ ಚಾಮರಾಜಗೌಡ ಹಾಗೂ ಕಾರ್ಯ ಪಾಲಕ ಎಂಜಿನಿಯರ್ ಸುಬ್ರಹ್ಮಣ್ಯ ಹಾಜರಿದ್ದರು.

ಅಂಕಿ–ಅಂಶ

₹69.60 ಕೋಟಿ:3ನೇ ಹಂತದ ಯೋಜನೆಯ ವೆಚ್ಚ

₹53.59 ಕೋಟಿ:ಯೋಜನೆಗೆ ಮೊದಲ ಹಂತದಲ್ಲಿ ಬಿಡುಗಡೆಯಾದ ಹಣ

98 ಕಿ.ಮೀ:ನೀರು ಸರಬರಾಜು ವಿತರಣಾ ಪೈಪ್‌ಗಳ ಉದ್ದ

2 ವರ್ಷ:ಕಾಮಗಾರಿ ಪೂರ್ಣಗೊಳಿಸಲು ವಿಧಿಸಿರುವ ಗಡುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT