ಮೈಸೂರು: ಮಾಸ್ಕ್ ಹಾಕದೇ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಿಂದ ಕಳೆದ 7 ತಿಂಗಳುಗಳಲ್ಲಿ ₹1.37 ಕೋಟಿ ದಂಡ ಸಂಗ್ರಹಿಸಲಾಗಿದೆ. ಭಾನುವಾರ (ಏ.18) ಒಂದೇ ದಿನ 1 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿ, ₹2.49 ಲಕ್ಷ ದಂಡವನ್ನು ವಸೂಲು ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಹೇಳಿದರು.

ಸಾರ್ವಜನಿಕ ಸಭೆ, ಸಮಾರಂಭಗಳು, ಹೋಟೆಲ್‌ಗಳು, ಕ್ಲಬ್‌ಗಳು ಸೇರಿದಂತೆ ಜನರು ಗುಂಪುಗೂಡುವ ಪ್ರದೇಶಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸುವ ಸಂಬಂಧ ಪ್ರಕರಣಗಳನ್ನು ದಾಖಲಿಸಲೆಂದೇ ‘ಕೋವಿಡ್ ಅಪ್ರೊಪರೀಯೇಟ್ ಬಿವೇವಿಯರ್ ಮಾನಿಟರಿಂಗ್ ಟೀಮ್’ (ಸಿಎಬಿ) ಅನ್ನು ರಚಿಸಲಾಗಿದೆ. ಸಬ್‌ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಒಟ್ಟು ನಾಲ್ವರು ಸಿಬ್ಬಂದಿ ಪ್ರತಿ ವಾಹನದಲ್ಲಿದ್ದು, ಗಸ್ತು ಕಾರ್ಯ ನಡೆಸುವರು. ಇಂತಹ ಒಟ್ಟು 3 ವಾಹನಗಳು ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮರಾಜ ಉಪವಿಭಾಗಗಳಲ್ಲಿ ಸಂಚರಿಸಲಿವೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ಅತಿ ಎಚ್ಚರದಿಂದ ಇರಬೇಕು. ಈ ತಂಡವು ವಿಡಿಯೊ ಚಿತ್ರೀಕರಣ ಮಾಡಿ ವಾಪಸ್ ಬರುತ್ತದೆ. ವಿಡಿಯೊವನ್ನು ನೋಡಿ ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಹಾಗಾಗಿ, ಹೋಟೆಲ್‌ಗಳು, ಕ್ಲಬ್‌ಗಳು, ವಿವಿಧ ಅಂಗಡಿ, ಕಲ್ಯಾಣ ಮಂಟಪಗಳ ಮಾಲೀಕರು ಎಚ್ಚರ ವಹಿಸಬೇಕು ಎಂದು ಅವರು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.