ಮೈಸೂರು: ಇಲ್ಲಿನ ನರಸಿಂಹರಾಜ ಮತ್ತು ಲಷ್ಕರ್ ಠಾಣೆ ಪೊಲೀಸರು ಸರಗಳ್ಳತನದ ನಾಲ್ವರು ಆರೋಪಿಗಳನ್ನು ಬಂಧಿಸಿ, ₹ 19.40 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ, ಆರೋಪಿಗಳಿಂದ ಚಿನ್ನದ ಸರವನ್ನು ಖರೀದಿಸುತ್ತಿದ್ದ ಆರೋಪಿಯೊಬ್ಬನನ್ನೂ ಪೊಲೀಸರು ಬಂಧಿಸಿದ್ದಾರೆ.

ಎನ್.ಆರ್.ಠಾಣೆ ಪೊಲೀಸರು ಕೆ.ಆರ್.ಮೊಹಲ್ಲಾ ನಿವಾಸಿ ಸಲ್ಮಾನ್ ಖಾನ್ ಅಲಿಯಾಸ್ ಸಲ್ಲು (28), ಶಾಂತಿನಗರ ನಿವಾಸಿ ತಾಜುದ್ದೀನ್ ಅಲಿಯಾಸ್ ಕಾಲು (21) ಹಾಗೂ ಇವರಿಂದ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದ ಆರೋಪದ ಮೇರೆಗೆ ಅಶೋಕರಸ್ತೆಯ ಮಹಮದ್ ಫರ್ವೇಜ್ (41) ಅವರನ್ನು ಬಂಧಿಸಿದ್ದಾರೆ. ಇವರಿಂದ ₹ ₹ 19.40 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಐಷಾರಾಮಿ ಜೀವನ ನಡೆಸಲು ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೆಡ್‌ಕಾನ್‌ಸ್ಟೆಬಲ್ ಚಿನ್ನದ ಸರ ಕಸಿದ ಕಳ್ಳರು

ವಿದ್ಯಾರಣ್ಯಪುರಂ ಹೆಡ್‌ಕಾನ್‌ಸ್ಟೆಬಲ್ ಇಲಿಯಾಸ್ ಎಂಬುವವರ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಚಿನ್ನದಸರವನ್ನು ಕಳ್ಳರು ಕಸಿದು ಪರಾರಿಯಾಗುವಾಗ ಒಬ್ಬಾತ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಇಲಿಯಾಸ್ ಅವರು ಸೇಂಟ್ ಫಿಲೊಮಿನಾ ಚರ್ಚ್ ಮುಂಭಾಗ ನಿಂತಿದ್ದಾಗ ಇಬ್ಬರು ಸರವನ್ನು ಕಿತ್ತುಕೊಂಡು ಓಡಿದ್ದಾರೆ. ಬೆನ್ನಟ್ಟಿದ ಸಾರ್ವಜನಿಕರು ಒಬ್ಬನನ್ನು ಹಿಡಿದಿದ್ದಾರೆ. ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.