ಮೈಸೂರು: ‘ಎಲ್ಲ ವರ್ಗದವರ ಹಿತಕ್ಕಾಗಿ ಸಂವಿಧಾನ ನೀಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರು ಕಷ್ಟದ ಕುಲುಮೆಯಲ್ಲಿ ಅರಳಿದ ಸಾಮರ್ಥ್ಯದ ಕಮಲ’ ಎಂದು ಸಂಸ್ಕೃತಿ ಚಿಂತಕ ಶಂಕರ ದೇವನೂರು ಬಣ್ಣಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ, ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಖಿಲ್ಲೆ ಮೊಹಲ್ಲಾದ ಅರಮನೆ ಜಪದಕಟ್ಟೆ ಮಠದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು, ಬರಹ ಹಾಗೂ ವಿಚಾರಧಾರೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅವರು ಬೆಂಕಿಯನ್ನು ಉಂಡು ಬೆಳಕು ಹಂಚಿದವರು. ನೋವು, ಅಪಮಾನವನ್ನು ಸಹಿಸಿಕೊಂಡು ಜಗತ್ತಿಗೆ ಬೆಳಕು ನೀಡಿದವರು. ಅವರು ಒಂದು ಜನಾಂಗಕ್ಕೆ ಸೀಮಿತವಲ್ಲ’ ಎಂದರು.

ಸಂಕುಚಿತ ಮನೋಭಾವ ಕಾರಣ

‘ನಮ್ಮಲ್ಲಿರುವ ಸಂಕುಚಿತ ಮನೋಭಾವದ ಕಾರಣದಿಂದಾಗಿಯೇ ದೇಶದಲ್ಲಿ ಇಂದಿಗೂ ತಾರತಮ್ಯ ಇದೆ. ಹೀಗಾಗಿಯೇ ಅಂಬೇಡ್ಕರ್ ಅವರು ಶೋಷಿತರನ್ನು ಕೇಂದ್ರವಾಗಿ ಇಟ್ಟುಕೊಂಡು ಕೆಲಸ ಮಾಡಿದರು. ಅವರು ಜ್ಞಾನದ ಪ್ರತೀಕ’ ಎಂದು ಹೇಳಿದರು.

‘ಗಣರಾಜ್ಯೋತ್ಸವವೆಂದರೆ ಸಮಾನತೆ, ಸಹೋದರತ್ವ ಹಾಗೂ ಅಂತಃಕರಣದ ದಿನ. ನಮ್ಮೆಲ್ಲರ ಬದುಕು ಬೆಳಕು ನೀಡಿದ ಅಂಬೇಡ್ಕರ್ ಅವರಂತೆ ಆಗಬೇಕು’ ಎಂದು ಆಶಿಸಿದರು.

‘ದೀರ್ಘಕಾಲದವರೆಗೆ ಬದುಕುವುದು ಮುಖ್ಯವಲ್ಲ. ಎಷ್ಟು ಜನರಿಗೆ ಅನುಕೂಲ ಮಾಡಿಕೊಟ್ಟೆವು ಎಂಬುದು ಮುಖ್ಯ. ನಮ್ಮ ಬದುಕು ಪ್ರದರ್ಶನ ಆಗಬಾರದು, ನಿದರ್ಶನವಾಗಬೇಕು. ಮಾನವೀಯ ಪ್ರೀತಿ, ಕಾರುಣ್ಯ ಹಾಗೂ ಸೇವಾ ಮನೋಭಾವದಲ್ಲಿ ಬದುಕಬೇಕು’ ಎಂದರು.

ಬದುಕು ಜೀವಪರವಾಗಿರಬೇಕು

‘ಆಸೆಯನ್ನು ದಾಸರಾಗಿಸಿಕೊಂಡು ಬದುಕುವವರಿಗೆ ಇಡೀ ಲೋಕವೇ ದಾಸನಾಗುತ್ತದೆ. ಬಂದು ಹೋಗುವ ನಡುವಿನ ಬದುಕು ಜೀವಪರವಾಗಿರಬೇಕು. ಇತರರಿಗೆ ಬದುಕುವವರು ಸತ್ತ ಮೇಲೂ ಜೀವಂತವಾಗಿ ಇರುತ್ತಾರೆ. ಅಂಬೇಡ್ಕರ್ ಅವರಂಥವರು ನೀಡಿದ ಬೆಳಕಿನಲ್ಲಿಯೇ ಸಮಾಜ ಇಂದಿಗೂ ನಡೆಯುತ್ತದೆ. ಇಂತಹ ಜೀವನ ನಮ್ಮದಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

‘ಋಷಿ, ಕೃಷಿ ಸಂಸ್ಕೃತಿ ಹೋಗಿ ಈಗ ಖುಷಿ ಸಂಸ್ಕೃತಿ ಬಂದಿದೆ. ನಮ್ಮ ಪರಂಪರೆಯ ಬೇರುಗಳನ್ನು ಬಿಟ್ಟರೆ ತಾಯಿಯನ್ನು ಕಳೆದುಕೊಂಡಂತೆಯೇ. ಆದ್ದರಿಂದ ನಮ್ಮ ಪರಂಪರೆಯನ್ನು ಮರೆಯಬಾರದು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ಮಾತನಾಡಿದರು. ಅರಮನೆ ಜಪದಕಟ್ಟದ ಮಠದ ಪೀಠಾಧ್ಯಕ್ಷ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಉಪನಿರ್ದೇಶಕ (ಪ್ರಸಾರಾಂಗ) ಬಿ.ಗೋವಿಂದ, ಶಂಕರವಿಲಾಸ ಸಂಸ್ಕೃತ ಪಾಠಶಾಲಾ ಸಮಿತಿಯ ಕಾರ್ಯದರ್ಶಿ ಎಸ್.ಜ್ಞಾನಶಂಕರ್, ಶಂಕರವಿಲಾಸ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕಿ ಎಲ್.ಪಂಕಜಾಕ್ಷಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.