ಕೆ.ಆರ್.ನಗರ: ಕೆಲವರು ಮುಡಿಕೊಟ್ಟು ಹರಕೆ ತೀರಿಸಿದರು. ಮೋಂಬತ್ತಿ ಹಚ್ಚಿ ಇಷ್ಟಾರ್ಥಗಳನ್ನು ದೇವರಲ್ಲಿ ಪ್ರಾರ್ಥಿಸಿದರು... ತಾಲ್ಲೂಕಿನ ಡೋರ್ನಹಳ್ಳಿಯಲ್ಲಿ ಶುಕ್ರವಾರ ಅದ್ದೂರಿಯಾಗಿ ನಡೆದ ಸಂತ ಅಂತೋಣಿ ವಾರ್ಷಿಕ ಮಹೋತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು.

ಶುಕ್ರವಾರ ಬೆಳಿಗ್ಗೆ 10ಕ್ಕೆ ಮೈಸೂರು ಧರ್ಮಪ್ರಾಂತದ ಪ್ರೇಷಿತ ಆಡಳಿತಾಧಿಕಾರಿ ಬರ್ನಾಡ್ ಮೊರಾಸ್ ಅವರಿಂದ ಹಬ್ಬದ ಆಡಂಬರ ಗಾಯನ, ಬಲಿಪೂಜೆ ನಡೆಯಿತು. ಜೂನ್ 5ರಿಂದ ಚರ್ಚ್ ಧರ್ಮಗುರು ಡೇವಿಡ್ ಸಗಾಯರಾಜ್ ಮತ್ತು ಆಡಳಿತಾಧಿಕಾರಿ ಪ್ರವೀಣ್ ಪೇದ್ರು ನೇತೃತ್ವದಲ್ಲಿ ನಡೆದ ವಾರ್ಷಿಕ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ವಿಧಿಗಳು, ಬಲಿ ಪೂಜೆ ನಡೆದಿದ್ದವು.

ಬೆಳಿಗ್ಗೆ 5ಕ್ಕೆ ಡೋರ್ನಹಳ್ಳಿ ಚರ್ಚ್ ನ ಧರ್ಮಗುರು ಡೇವಿಡ್ ಸಗಾಯರಾಜ್, ಬೆಳಿಗ್ಗೆ 6ಕ್ಕೆ ಕೋಲ್ಕತ್ತಾ ಧರ್ಮಪ್ರಾಂತದ ಪ್ರಾಂಶುಪಾಲ ರಾಬರ್ಟ್ ಗ್ರೆಗೋರಿ ಮೊಂತೇರೊ, ಬೆಳಿಗ್ಗೆ 7ಕ್ಕೆ ಮೈಸೂರು ಧರ್ಮ ಕ್ಷೇತ್ರದ ಕೋಶಾಧಿಕಾರಿ ಸೆಬಾಸ್ಟಿಯನ್ ಅಲೆಗ್ಸಾಂಡರ್, ಬೆಳಿಗ್ಗೆ 8ಕ್ಕೆ ಯಾದವಗಿರಿ ಧರ್ಮಗುರು ರೋಹನ್, ಬೆಳಿಗ್ಗೆ 11.30ಕ್ಕೆ ಬೋಗಾದಿ ಧರ್ಮಗುರು ವಾಲೆಂಟಿನ್ ರಾಜೇಂದ್ರ ಕುಮಾರ್ ಜೆ., ಮಧ್ಯಾಹ್ನ 1ಕ್ಕೆ ಮೈಸೂರು ಪುಷ್ಪಾಶ್ರಮದ ಧರ್ಮಗುರು ಓಸ್ವಾಲ್ಡ್ ಕ್ರಾಸ್ತ, ಮಧ್ಯಾಹ್ನ 3ಕ್ಕೆ ಮಂಡ್ಯ ಧರ್ಮಗುರು ಮರಿರಾಜ್, ಸಂಜೆ 4ಕ್ಕೆ ಶ್ರೀರಾಮಪುರ ಧರ್ಮಗುರು ಆರ್.ಆರೋಗ್ಯಸ್ವಾಮಿ, ಸಂಜೆ 5.30ಕ್ಕೆ ಮೈಸೂರು ಧರ್ಮ ಕ್ಷೇತ್ರದ ಸಹಾಯಕ ಕೋಶಾಧಿಕಾರಿ ಯೇಸು ಪ್ರಸಾದ್ ಅವರಿಂದ ಕನ್ನಡ, ಇಂಗ್ಲಿಷ್ ಮತ್ತು ತಮಿಳಿನಲ್ಲಿ ಗಾಯನ ಬಲಿಪೂಜೆ ನಡೆಯಿತು.

ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಕುಟುಂಬ ಸಮೇತ ವಾರ್ಷಿಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಂಜೆ ನಡೆದ ಸಂತ ಅಂತೋಣಿ ಅವರ ವೈಭವದ ತೇರು ಮೆರವಣಿಗೆಯಲ್ಲಿ ಭಾಗವಹಿಸಿದರು. ಚರ್ಚ್ನಲ್ಲಿ ಪ್ರಸಾದ ಸ್ವೀಕರಿಸಿದರು.

ಕೆಲವರು ಸ್ಥಳೀಯವಾಗಿ ಮನೆ, ಶೆಡ್ ಬಾಡಿಗೆ ಹಿಡಿದು ಸಸ್ಯಾಹಾರ, ಮಾಂಸಾಹಾರ ಅಡುಗೆ ತಯಾರಿಸಿಕೊಂಡು ಊಟ ಸವಿದರು. ಕೆಲವರು ಸ್ಥಳೀಯವಾಗಿ ತೆರೆಯಲಾಗಿದ್ದ ಹೋಟೆಲ್ ಗಳಲ್ಲಿ ಊಟ ಸವಿದರು. ಕೆಲವರು ಭಕ್ತರಿಗೆ ಬ್ರೆಡ್, ಬನ್, ಪಾನಕ ವಿತರಿಸಿದರು.

ಇಲ್ಲಿನ ಸಂತ ಅಂತೋಣಿ ನಮ್ಮ ಮನೆ ದೇವರು. 25ವರ್ಷಗಳಿಂದ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇನೆಹರಕೆ ಹೊತ್ತಿದ್ದೆ ಮುಡಿಕೊಟ್ಟು ಹರಕೆ ತೀರಿಸಿದ್ದೇನೆ. ಒಂದು ದಿನ ಮುಂಚೆ ಕುಟುಂಬ ಸಮೇತ ಬರುತ್ತೇವೆ. ಸಂಜೆ ತೇರು ನೋಡಿ ಶನಿವಾರ ಬೆಳಿಗ್ಗೆ ಮನೆಗೆ ತೆರಳುತ್ತೇವೆ.
ಅಂತೋನಿರಾಜ್ ಸೋಲೂರು, ರಾಮನಗರ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.