ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ವಿದ್ಯಾರ್ಥಿಗಳ ಮೇಲೆ ಹಲ್ಲೆ: ಆರೋಪಿಗಳ ಬಂಧನ

Published : 25 ಸೆಪ್ಟೆಂಬರ್ 2024, 16:16 IST
Last Updated : 25 ಸೆಪ್ಟೆಂಬರ್ 2024, 16:16 IST
ಫಾಲೋ ಮಾಡಿ
Comments

ಮೈಸೂರು: ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ₹15 ಸಾವಿರ ನಗದು ಹಾಗೂ ₹1 ಲಕ್ಷ ಮೌಲ್ಯದ ಬೈಕ್ ಕಸಿದು ಪರಾರಿಯಾಗಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ನರಸಿಂಹರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗೌಸಿಯಾನಗರದ ನಿವಾಸಿ ಸೈಯದ್ ರಯಾನ್ (18), ಯಾಸಿನ್ (19) ಹಾಗೂ ಪರ್ವೀಜ್ (18) ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

‘ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿ ನಿವಾಸಿಗಳಾದ ಶ್ರೇಯಸ್ ಅರಸ್ ಹಾಗೂ ನಾಗೇಶ್ ಸೆ.19ರಂದು ಸಂಜೆ ಕಾಲೇಜು ಮುಗಿಸಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಹಳೇ ಕೆಸರೆ ಬಳಿ ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿದ್ದರು. ಈ ವೇಳೆ ಅಲ್ಲಿಗೆ ಬಂದ ಐವರು ಹಣ ನೀಡುವಂತೆ ಒತ್ತಾಯಿಸಿ ₹15 ಸಾವಿರವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು, ಬೈಕನ್ನೂ ಕಸಿದು ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಸೆ.23ರಂದು ಗೌಸಿಯಾನಗರದ ಶ್ರೀಕಂಠೇಶ್ವರ ಶಾಲೆಯ ಬಳಿ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಹಸು, ಕರು ಸಾಗಣೆ: ಇಬ್ಬರ ಬಂಧನ

ಮೈಸೂರು: ಅಕ್ರಮವಾಗಿ ಹಸು, ಕರುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಹೆಬ್ಬಾಳ ಠಾಣೆ ಪೊಲೀಸರು 25 ರಾಸುಗಳನ್ನು ರಕ್ಷಿಸಿದ್ದಾರೆ.

ಹುಣಸೂರು ರತ್ನಪುರಿ ಬಳಿಯ ದರ್ಗಾದಲ್ಲಿ ರೋಹನ್ ಹಾಗೂ ಅಸ್ರುಲ್ಲಾ ಷರೀಫ್ ಹಸು, ಕರುಗಳನ್ನು ಖರೀದಿಸಿ ಮೈಸೂರಿಗೆ ತರುತ್ತಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಹೆಬ್ಬಾಳ ವರ್ತುಲ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT