ಹುಣಸೂರು: ನಗರದ ರೆಸ್ಟೋರೆಂಟ್ ಮತ್ತು ಚಿಲ್ಲರೆ ಅಂಗಡಿ ಮೇಲೆ ಕೋಟ್ಪಾ ತಂಡದಿಂದ ದಾಳಿ ನಡೆಸಿ 145 ಪ್ರಕರಣ ದಾಖಲಿಸಿ ₹ 16 ಸಾವಿರ ದಂಡ ವಿಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ರಾಜೇಶ್ವರಿ ತಿಳಿಸಿದ್ದಾರೆ.
ಕಾರ್ಖಾನೆ ರಸ್ತೆ ಮತ್ತು ಇತರೆ ಪ್ರಮುಖ ರಸ್ತೆಯಲ್ಲಿನ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ಒಳಗೆ ಸಿಗರೇಟ್ ಸೇದುವ ಪ್ರಕರಣ, ಪ್ಲಾಸ್ಟಿಕ್ ಮಾರಾಟ ಸೇರಿದಂತೆ ಕಾನೂನು ಉಲ್ಲಂಘನೆ ಮಾಡಿದ ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ದಂಡ ವಿಧಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಾಳೆ ಸಮಯದಲ್ಲಿ ಆರೋಗ್ಯ, ನಗರಸಭೆ, ಶಿಕ್ಷಣ, ಶಿಶು ಕಲ್ಯಾಣ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ಜಿಲ್ಲಾ ಸಂಯೋಜನಾಧಿಕಾರಿ ಶಿವಕುಮಾರ್ ಜಿ, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ನವಿದುಲ್ಲಾ ಷರೀಫ್, ನಗರಸಭೆ ಆರೋಗ್ಯಾಧಿಕಾರಿ ಸತೀಶ್, ವೀಣಾ, ಎಸ್.ಎಸ್.ಐ ರವಿ, ಶಿಕ್ಷಣ ಇಲಾಖೆಯ ಕುಮಾರಸ್ವಾಮಿ ಇದ್ದರು.