ಎಚ್.ಡಿ.ಕೋಟೆ: ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರ ವ್ಯಾಪ್ತಿಯ ಸುಂಕದಕಟ್ಟೆ ಬಳಿ ಮಂಗಳವಾರ ಬೆಳಿಗ್ಗೆ ಸಫಾರಿ ವೇಳೆ ದೇಹದ ಮೇಲ್ಭಾಗದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಕಪ್ಪು ಚಿರತೆ ಕಾಣಿಸಿಕೊಂಡಿತು.

12 ವರ್ಷದ ಚಿರತೆಯು ಬಿಸಲವಾಡಿ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ಡಿ.ಬಿ. ಕುಪ್ಪೆ ಭಾಗದಲ್ಲಿ 2 ತಿಂಗಳ ಹಿಂದೆ ಕಾಣಿಸಿಕೊಂಡಿತ್ತು.

‘ಚಿರತೆಯು ಸಫಾರಿ ವ್ಯಾಪ್ತಿಯಿಂದ ದೂರವಿದ್ದು, ನಾಗರಹೊಳೆ ವ್ಯಾಪ್ತಿಯಲ್ಲಿ ತನ್ನ ಗಡಿ ಗುರುತಿಸಿಕೊಂಡಿತ್ತು’ ಎಂದು ಅಂತರಸಂತೆ ವನ್ಯಜೀವಿ ವಲಯ ಅರಣ್ಯಾಧಿಕಾರಿ ಎಸ್.ಎಸ್. ಸಿದ್ದರಾಜು ತಿಳಿಸಿದರು.

‘ಹುಲಿಗಳು ಒಂದು ಗಡಿಯನ್ನು ಗುರುತಿಸಿಕೊಂಡ ಬಳಿಕ ಮತ್ತೊಂದು ಕಡೆಗೆ ಹೋಗುವುದಿಲ್ಲ. ಚಿರತೆಗಳು ತಮ್ಮ ಗಡಿ ಪ್ರದೇಶವನ್ನು ಆಗಾಗ್ಗೆ ಬದಲಿಸುತ್ತಿರುತ್ತವೆ’ ಎಂದು ವನ್ಯಜೀವಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.