ಮೈಸೂರು: ‘ಅಂಗವಿಕಲ ಮಕ್ಕಳಿಗೆ ವಿಶೇಷ ಕಾಳಜಿ ತೋರಬೇಕು. ಎಲ್ಲ ಮಕ್ಕಳಂತೆ ಉತ್ತಮ ಬಾಲ್ಯವನ್ನು ಅವರಿಗೆ ಪೋಷಕರು ಕಟ್ಟಿಕೊಡಬೇಕು’ ಎಂದು ಬಿಜೆಪಿ ಮುಖಂಡ ಮಾ.ವಿ.ರಾಮಪ್ರಸಾದ್ ಹೇಳಿದರು.

ಚಾಮುಂಡಿಪುರಂನ ಅರುಣೋದಯ ವಿಶೇಷ ಮಕ್ಕಳ ಶಾಲೆಯಲ್ಲಿ ಆರೋಗ್ಯ ಉಚಿತ ತಪಾಸಣೆಗೆ ಚಾಲನೆ ನೀಡಿ, ‘ದಶಕದಿಂದಲೂ ಶಾಲೆಯು ಉತ್ತಮ ಕಾರ್ಯವನ್ನು ಮಾಡುತ್ತಿದೆ. ಉನ್ನತ ಶಿಕ್ಷಣ ಪಡೆಯಲು ಅಗತ್ಯವಾದ ಅಡಿಪಾಯ ಶಿಕ್ಷಣವನ್ನು ಶಾಲೆಯು ನೀಡುತ್ತಿದೆ’ ಎಂದರು.

‘ರೋಟರಿ ಕ್ಲಬ್ ಆಫ್ ಹೆರಿಟೇಜ್ ವತಿಯಿಂದ ಅನಾಥಾಶ್ರಮ, ವೃದ್ಧಾಶ್ರಮ ಮತ್ತು ವಿಶೇಷ ಮಕ್ಕಳ ಶಾಲೆಗೆ ನಿತ್ಯವೂ 25 ಕೆ.ಜಿ ಅಕ್ಕಿ ನೀಡುತ್ತಿದ್ದು, ಶಾಲೆಗೆ ಅಗತ್ಯವಿರುವ ಮಾಸಿಕ 75 ಕೆ.ಜಿ ಅಕ್ಕಿಯನ್ನು ನೀಡಲಾಗುವುದು’ ಎಂದು ಕ್ಲಬ್ ಅಧ್ಯಕ್ಷ ಆರ್.ರಾಜೇಶ್ ಹೇಳಿದರು.

ಜೀವನದಿ ಟ್ರಸ್ಟ್ನ ಆಯೇಷಾ, ಅರವಿಂದ ಆಸ್ಪತ್ರೆ ವೈದ್ಯ ಭರತ್, ಕೇಶವಬಿದ್ರೆ, ಗೋಪಾಲಕೃಷ್ಣ, ಸನತ್ಕುಮಾರ್, ನಾರಾಯಣ ನಾಯಕ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.