ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಕಾವೇರಿ ಹೋರಾಟ; ಮುಂದುವರಿದ ಪ್ರತಿಭಟನೆ

Published 7 ಅಕ್ಟೋಬರ್ 2023, 7:55 IST
Last Updated 7 ಅಕ್ಟೋಬರ್ 2023, 7:55 IST
ಅಕ್ಷರ ಗಾತ್ರ

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಾವೇರಿ ಕ್ರಿಯಾ ಸಮಿತಿಯು ದೊಡ್ಡ ಗಡಿಯಾರದ ಬಳಿ ಹಮ್ಮಿಕೊಂಡಿರುವ ನಿರಂತರ ಧರಣಿ ಸತ್ಯಾಗ್ರಹದಲ್ಲಿ ಶುಕ್ರವಾರ ಜಿಲ್ಲಾ ಚಿನ್ನ ಮತ್ತು ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಸದಸ್ಯರು ಪಾಲ್ಗೊಂಡು ಪ್ರತಿಭಟಿಸಿದರು.

ಸಮಿತಿ ಅಧ್ಯಕ್ಷ ಜಯಪ್ರಕಾಶ್‌ ಮಾತನಾಡಿ, ‘ಕಾವೇರಿ ವಿಚಾರದಲ್ಲಿ ಹಿಂದೆ ಸರಿಯುವ ಮಾತಿಲ್ಲ. ಎಲ್ಲರೂ ಅಲ್ಲಿನ ನೀರನ್ನೇ ಬಳಸುತ್ತಿದ್ದಾರೆ. ಹೀಗಾಗಿ ಪ್ರತಿನಿತ್ಯ ವಿವಿಧ ಸಂಘಟನೆ ಸದಸ್ಯರನ್ನು ಒಟ್ಟು ಸೇರಿಸಿ ಹೋರಾಟ ಮುಂದುವರಿಸಲಿದ್ದೇವೆ’ ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಟಿ.ಸುರೇಶ್, ರಾಘವೇಂದ್ರ ಶೇಟ್‌, ಮಂಜುನಾಥ್, ಗುರು, ಶಶಿ, ಸಮಿತಿಯ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಬಾಲಕೃಷ್ಣ, ಸುರೇಶ್‌ ಗೌಡ, ತೇಜೇಶ್ ಲೋಕೇಶ್ ಗೌಡ, ಬಾಲಕೃಷ್ಣ, ಮೆಲ್ಲಹಳ್ಳಿ ಮಹದೇವಸ್ವಾಮಿ, ಕುಮಾರ್‌ ಗೌಡ, ಸ್ವಾಮಿ ಗೌಡ ಬಲ್ಲಹಳ್ಳಿ, ಸಿದ್ದಲಿಂಗು, ರಾಧಾಕೃಷ್ಣ ಇದ್ದರು.

ಪ್ರತಿಭಟನಾ ಮೆರವಣಿಗೆ: ಭಾವಸಾರ ಕ್ಷತ್ರೀಯ ಮಂಡಳಿಯ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ ಗಾಂಧಿ ವೃತ್ತದ ಬಳಿ ಧರಣಿ ನಡೆಸಿದರು.

ಕಬೀರ್‌ ರಸ್ತೆಯಲ್ಲಿರುವ ಪಾಂಡುರಂಗ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು ಲಷ್ಕರ್‌ ಮೊಹಲ್ಲಾ, ಅಶೋಕ ರಸ್ತೆ ಮಾರ್ಗ, ಗಾಂಧಿ ವೃತ್ತದವರೆಗೆ ಸಾಗಿ ಬಂತು.

ಮೆರವಣಿಗೆಯುದ್ದಕ್ಕೂ ಪ್ರತಿಭಟನಕಾರರು ಕನ್ನಡ ಬಾವುಟ ಪ್ರದರ್ಶಿಸಿ ‘ಉಳಿಸಿ ಉಳಿಸಿ ಕಾವೇರಿ’, ‘ಕಾವೇರಿ ನಮ್ಮದು ನಮ್ಮದು’, ‘ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ’, ‘ಬೆಳೆಸಿ ಬೆಳೆಸಿ ಕರ್ನಾಟಕ ಬೆಳೆಸಿ’, ‘ರಕ್ತ ಕೊಟ್ಟರೂ ನೀರು ಕೊಡಲ್ಲ’ ಇತ್ಯಾದಿ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ಮಂಡಳಿಯ ಕಾರ್ಯದರ್ಶಿ ರಾಕೇಶ್ ಮಾತನಾಡಿ, ‘ಕಾವೇರಿ ನೀರು ಬತ್ತುತ್ತಿದೆ. ಈ ಪರಿಸ್ಥಿತಿಯಲ್ಲೂ ನ್ಯಾಯಾಲಯ ಮತ್ತು ಕಾವೇರಿ ಪ‍್ರಾಧಿಕಾರ ನೀರು ಬಿಡಲು ಆದೇಶಿಸಿರುವುದು ವಿಷಾದನೀಯ. ರೈತರ ಹಿತಕ್ಕಾಗಿ ರಾಜ್ಯ ಸರ್ಕಾರವು ಯಾವುದೇ ಒತ್ತಡಕ್ಕೆ ಮಣಿಯಬಾರದು ಹಾಗೂ ತಮಿಳುನಾಡಿಗೆ ನೀರು ಬಿಡಬಾರದು’ ಎಂದು ಒತ್ತಾಯಿಸಿದರು.

ಭಾವಸಾರ ಕ್ಷತ್ರೀಯ ಮಂಡಳಿಯ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ ಗಾಂಧಿ ವೃತ್ತದ ಬಳಿ ಧರಣಿ ನಡೆಸಿದರು– ಪ್ರಜಾವಾಣಿ ಚಿತ್ರ
ಭಾವಸಾರ ಕ್ಷತ್ರೀಯ ಮಂಡಳಿಯ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ ಗಾಂಧಿ ವೃತ್ತದ ಬಳಿ ಧರಣಿ ನಡೆಸಿದರು– ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT