ಮೈಸೂರು: ‘ವಿದ್ಯುತ್ ಅವಘಡಗಳ ಪ್ರಮಾಣವನ್ನು ಶೂನ್ಯಕ್ಕೆ ತರುವುದು ನೌಕರರೆಲ್ಲರ ಗುರಿಯಾಗಲಿ. ಈ ನಿಟ್ಟಿನಲ್ಲಿ ಸೆಸ್ಕ್ ವ್ಯಾಪ್ತಿಯ ಪ್ರತಿಯೊಬ್ಬ ಪವರ್ಮ್ಯಾನ್ಗಳೂ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ‘ಸೆಸ್ಕ್’ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಸೂಚಿಸಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಮೈಸೂರು ವಿಭಾಗದಿಂದ ಇಲ್ಲಿನ ರಾಜೇಂದ್ರನಗರದ ಕವಿಪ್ರನಿ ನೌಕರರ ಸಮುದಾಯದ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಸತಿಗೃಹ ಶಂಕುಸ್ಥಾಪನೆ, ನವೀಕೃತ ಸಮುದಾಯ ಭವನ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯುತ್ ಅವಘಡಗಳಿಂದ ಜೀವ ಹಾನಿ, ಆಸ್ತಿ ನಷ್ಟದ ಜೊತೆಗೆ ಮೃತರ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಪವರ್ಮ್ಯಾನ್ಗಳು ಕೆಲಸ ಮಾಡುವಾಗ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದರಿಂದ ವಿದ್ಯುತ್ ಅವಘಡಗಳ ಪ್ರಮಾಣ ತಗ್ಗಿಸಬಹುದಾಗಿದೆ. ಬಹುಮುಖ್ಯವಾಗಿ ಸೆಸ್ಕ್ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಗಳ ಪ್ರಮಾಣವನ್ನು ಶೂನ್ಯಕ್ಕೆ ತರುವ ಗುರಿ ಸಾಧಿಸಬಹುದು’ ಎಂದರು.

ಸಹಕಾರದಿಂದ:

‘ಯಾವುದೇ ಸಂಸ್ಥೆಯ ಪ್ರಗತಿ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಪರಿಸ್ಪರ ಸಹಕಾರ ಮನೋಭಾವದಿಂದ ಕೈಜೋಡಿಸಿ, ಕಾರ್ಯನಿರ್ವಹಿಸಿದರೆ ಮಾತ್ರ ಪ್ರಗತಿ ಆಗುತ್ತದೆ. ಸೆಸ್ಕ್ ಸದಾ ಸಿಬ್ಬಂದಿಯೊಂದಿಗೆ ಇರಲಿದ್ದು, ಸಂಸ್ಥೆಯ ಉಳಿವು ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು’ ಎಂದು ಹೇಳಿದರು.

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲರಾಜು, ‘ಪವರ್ಮ್ಯಾನ್ಗಳು ನಮ್ಮ ಸಂಸ್ಥೆಯ ಶಕ್ತಿಯಾಗಿದ್ದಾರೆ. ಅವರು ಯೋಧರಂತೆ 24 ಗಂಟೆಗಳು ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡುವುದರಿಂದ ಸಂಸ್ಥೆಗೆ ಒಳ್ಳೆಯ ಹೆಸರು ಬರಲು ಕಾರಣವಾಗಿದೆ. ಹೀಗಾಗಿ ಅವರು ಹಾಗೂ ಕುಟುಂಬಕ್ಕೆ ನೆರವಾಗಲು ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ನೀಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸುರಕ್ಷತಾ ಕಿಟ್ಗಳನ್ನು ವಿತರಿಸಲಾಗಿದೆ’ ಎಂದು ತಿಳಿಸಿದರು.

ಕೆಳ ಹಂತದವರಿಗೂ:

ಕೆಪಿಟಿಸಿಎಲ್ ನೌಕರರ ಸಂಘ ಹಾಗೂ ಒಕ್ಕೂಟದ ಅಧ್ಯಕ್ಷ ಕೆ.ಬಲರಾಮ್ ಮಾತನಾಡಿ, ‘ರಾಜ್ಯದ ಇತರ ಎಸ್ಕಾಂಗಳಿಗೆ ಹೋಲಿಸಿದರೆ ಸೆಸ್ಕ್ನಲ್ಲಿ ಸಿಬ್ಬಂದಿ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಜೊತೆಗೆ ವರ್ಗಾವಣೆ, ಬಡ್ತಿ, ಅನುಕಂಪದ ಆಧಾರದ ಕೆಲಸ ಎಲ್ಲ ಸೌಲಭ್ಯಗಳೂ ಲಭಿಸುತ್ತಿದೆ. ಇದರೊಂದಿಗೆ ನೌಕರರಿಗೆ ಸೂಕ್ತ ತರಬೇತಿ ಕಲ್ಪಿಸಿ, ಕೆಳಹಂತದ ಸಿಬ್ಬಂದಿಗೂ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ವಿದ್ಯುತ್ ನಿಗಮಗಳು ಖಾಸಗೀಕರಣಗೊಂಡರೆ, ಜನರಿಗೆ ಈಗ ನೀಡುತ್ತಿರುವ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಖಾಸಗೀಕರಣ ಆಗಬಾರದು’ ಎಂದರು.

ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟ ಪವರ್ಮ್ಯಾನ್ ಎ.ಜೆ. ವರುಣ್ಕುಮಾರ್ ಅವರ ಕುಟುಂಬದವರಿಗೆ ₹ 1.06 ಕೋಟಿ ಪರಿಹಾರದ ಚೆಕ್ ವಿತರಿಸಲಾಯಿತು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಮ್, ಖಜಾಂಚಿ ವರದರಾಜ್, ಸೆಸ್ಕ್ ಎಸ್ಇ ಸುನೀಲ್, ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕಿ (ತಾಂತ್ರಿಕ) ಶರಣಮ್ಮ ಎಸ್. ಜಂಗಿನ, ಪ್ರಧಾನ ವ್ಯವಸ್ಥಾಪಕಿ (ಆಂತರಿಕ ಲೆಕ್ಕಪರಿಶೋಧನೆ) ಲಿಂಗರಾಜಮ್ಮ, ಮುಖ್ಯ ಎಂಜಿನಿಯರ್ ಎ.ಆರ್. ಮೃತ್ಯುಂಜಯ, ಪೂರ್ಣಚಂದ್ರ ತೇಜಸ್ವಿ, ಮೋಹನ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.