ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಅಮಾನತುಗೊಂಡ ಪೊಲೀಸ್‌ಗೆ ಮುಖ್ಯಮಂತ್ರಿ ಪದಕ

Published 15 ಆಗಸ್ಟ್ 2024, 23:35 IST
Last Updated 15 ಆಗಸ್ಟ್ 2024, 23:35 IST
ಅಕ್ಷರ ಗಾತ್ರ

ಮೈಸೂರು: ಪೊಲೀಸ್‌ ಇಲಾಖೆಯ 2023 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದವರ ಪಟ್ಟಿ ಬಿಡುಗಡೆಗೊಂಡಿದ್ದು, ಈಚೆಗೆ ಕರ್ತವ್ಯ ಲೋಪದ ಆರೋಪದಲ್ಲಿ ಅಮಾನತುಗೊಂಡಿರುವ ಸಿಸಿಬಿ ಘಟಕದ ಹೆಡ್‌ ಕಾನ್‌ಸ್ಟೆಬಲ್ ಪೇದೆ ಸಲೀಂ ಪಾಷಾ ಅವರಿಗೂ ಪದಕ ದೊರಕಿದೆ.

ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಹಾಗೂ ಗಾಂಜಾ ಪ್ರಕರಣಗಳಲ್ಲಿ ಆರೋಪಿಗಳು ಹಾಗೂ ಅವರ ಸಂಬಂಧಿಕರ ಜೊತೆಗೆ ಸಂಪರ್ಕ ಹೊಂದಿದ ಬಗ್ಗೆ ಸಂಚಾರ ಮತ್ತು ಅಪರಾಧ ಡಿಸಿಪಿ ಜಾಹ್ನವಿ ಅವರಿಗೆ ದೂರು ಸಲ್ಲಿಕೆಯಾಗಿತ್ತು.

ಅವರನ್ನು ವಿಚಾರಣೆಗೊಳಪಡಿಸಿದಾಗ ಫೊನ್‌ ಮೂಲಕ ಆರೋಪಿಗಳ ಸಂಬಂಧಿಕರನ್ನು ಸಂಪರ್ಕಿಸಿರುವುದು ಸಾಬೀತಾಗಿದ್ದು, ವಿಚಾರಣೆ ನಡೆಯುತ್ತಿರುವಂತೆಯೇ ರಾಜ್ಯ ಪೊಲೀಸ್‌ (ಶಿಸ್ತು ನಡಾವಳಿ) ಅನ್ವಯ ಜುಲೈ 12ರಂದು ಅಮಾನತುಗೊಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆಗೆ ಸಲೀಂ ಪಾಷಾ ಲಭ್ಯರಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT