ಸೇಂಟ್ ಫಿಲೊಮಿನಾ ಚರ್ಚ್ ವಿದ್ಯುತ್ ಬೆಳಕಿನಿಂದ ಕಂಗೊಳಿಸಿತು
ಬಾರ್ತೊಲೋಮಿಯಾ ಚರ್ಚ್
ಹೊಳೆದ ನಕ್ಷತ್ರಗಳು ಬೆಳಕಿನ ವೈಭವ
ನಗರದ ಹೃದಯ ಭಾಗದಲ್ಲಿರುವ ಫಿಲೊಮಿನಾ ಸಾಡೇ ವೆಸ್ಲಿ ಬಾರ್ತೊಲೋಮಿಯಾ ಹಾರ್ಡ್ವಿಕ್ ಆರ್.ಎಸ್.ನಾಯ್ಡು ನಗರದ ಇನ್‌ಫೆಂಟ್ ಜೀಸಸ್ ಯಾದವಗಿರಿಯ ಸೇಕ್ರೆಡ್ ಹಾರ್ಟ್ ಜಯಲಕ್ಷ್ಮಿಪುರಂನ ಸೇಂಟ್ ಜೋಸೆಫ್ ವಿಶ್ವೇಶ್ವರ ನಗರದ ಸೇಂಟ್ ಥಾಮಸ್ ಸೇಂಟ್ ಮೇರಿಸ್ ಸೇರಿದಂತೆ ನಗರದಲ್ಲಿರುವ 40ಕ್ಕೂ ಹೆಚ್ಚು ಚರ್ಚ್ ಹಾಗೂ ಪ್ರಾರ್ಥನಾ ಸಭೆಗಳ ಕಟ್ಟಡಗಳು ವಿದ್ಯುತ್ ದೀಪಗಳನ್ನು ಹೊಂದಿದ್ದವು. ತಾರೆಗಳು ತೂಗಿದವು. ಆವರಣಗಳು ಸಾಂತಾ ಕ್ಲಾಸ್‌ನ ಚಾರಿಯೇಟ್ ಪ್ರಾಣಿಗಳು ಮಿನುಗುವ ನಕ್ಷತ್ರಗಳಿಂದ ಅಲಂಕೃತಗೊಂಡಿದ್ದವು. ವೆಸ್ಲಿ ಚರ್ಚ್‌ನಲ್ಲಿ ವನ್ಯಪ್ರಾಣಿಗಳ ಬೆಳಕಿನ ಬಲ್ಬ್‌ಗಳನ್ನು ಹೊದ್ದಿದ್ದವು. ಸಂಜೆಯಿಂದಲೇ ಚರ್ಚ್‌ಗಳತ್ತ ಬಂದ ಕ್ರೈಸ್ತರು ಪ್ರಾರ್ಥನೆ ಮಾಡಿದರು. ಅಲಂಕೃತ ಆಸ್ಪತ್ರೆಗಳು: ಸಿಎಸ್‌ಐ ಮಿಷನ್ ಆಸ್ಪತ್ರೆ ಸೇಂಟ್ ಜೋಸೆಫ್ ಸೇಂಟ್ ಮೇರಿಸ್ ಆಸ್ಪತ್ರೆಗಳೂ ಕ್ರಿಸ್‌ಮಸ್‌ಗೆ ಅಲಂಕೃತಗೊಂಡಿವೆ. ಸಿಕೆಸಿ ಸೇಂಟ್ ಜೋಸೆಫ್ ನಿರ್ಮಲಾ ಸೇರಿದಂತೆ ಹಲವು ಶಾಲೆಗಳಲ್ಲೂ ಹಬ್ಬದ ಅಲಂಕಾರ ಮಾಡಲಾಗಿದೆ.