ಮೈಸೂರು: ಜಿಲ್ಲೆಯಲ್ಲಿ ಹಲವು ದಿನಗಳ ಬಿಡುವಿನ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಮೂರಂಕಿಗೆ ಇಳಿದಿದ್ದು, ಹೊಸದಾಗಿ 974 ಮಂದಿಗೆ ಸೋಂಕು ದೃಢಪಟ್ಟಿದೆ.

ಕಳೆದ ತಿಂಗಳಲ್ಲಿ ಏರುಗತಿಯಲ್ಲೇ ಸಾಗಿದ್ದ ಪ್ರಕರಣಗಳು ಜೂನ್ ಆರಂಭದಿಂದ ಇಳಿಕೆಯ ಹಾದಿಯಲ್ಲಿದೆ. 1,241 ಮಂದಿ ಗುಣಮುಖರಾಗಿದ್ದಾರೆ. ಇದೀಗ 14,059 ಸಕ್ರಿಯ
ಪ್ರಕರಣಗಳು ಇವೆ.

ಮೈಸೂರು ನಗರದಲ್ಲಿ 426, ಮೈಸೂರು ತಾಲ್ಲೂಕು 86, ಎಚ್.ಡಿ.ಕೋಟೆ 58, ಹುಣಸೂರು 99, ಕೆ.ಆರ್.ನಗರ 88, ನಂಜನಗೂಡು 63, ಪಿರಿಯಾಪಟ್ಟಣ 113, ತಿ.ನರಸೀಪುರ 41 ಪ್ರಕರಣಗಳು ವರದಿಯಾಗಿವೆ. ನಗರದ ಜತೆ ಗ್ರಾಮೀಣ ಪ್ರದೇಶಗಳಲ್ಲೂ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ.

ರೋಗಿಗಳ ಸಂಪರ್ಕಕ್ಕೆ ಬಂದ 868 ಮಂದಿ, ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ (ಐಎಲ್ಐ) ಬಳಲುತ್ತಿದ್ದ 91 ಮಂದಿ, ತೀವ್ರ ಉಸಿರಾಟ ಸಮಸ್ಯೆಯಿಂದ (ಎಸ್ಎಆರ್ಐ) ಬಳಲುತ್ತಿದ್ದ 15 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತದ ಮಂಗಳವಾರದ ವರದಿ ತಿಳಿಸಿದೆ.

7,876 ಮಂದಿ ಮನೆಗಳಲ್ಲೇ ಐಸೋಲೇಷನ್ ಆಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ 759, ಖಾಸಗಿ ಆಸ್ಪತ್ರೆಗಳಲ್ಲಿ 2,460 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ 1,801, ಕೋವಿಡ್ ಆರೈಕೆ ಕೇಂದ್ರಗಳಲ್ಲಿ 402 ಹಾಗೂ ಖಾಸಗಿ ಕೋವಿಡ್ ಹೆಲ್ತ್ ಕೇರ್ ಸೆಂಟರ್ಗಳಲ್ಲಿ 755 ಮಂದಿ ಇದ್ದಾರೆ.

15 ಸಾವು: ಜಿಲ್ಲೆಯಲ್ಲಿ ಕೋವಿಡ್ಗೆ ಮತ್ತೆ 15 ಮಂದಿ ಮೃತಪಟ್ಟಿದ್ದು, ಸತ್ತವರ ಸಂಖ್ಯೆ 1,754ಕ್ಕೆ ತಲುಪಿದೆ. 50, 46, 48, 77, 54, 56, 92 ವರ್ಷದ ಪುರುಷರು ಹಾಗೂ 45, 25, 65, 55, 59, 28, 50, 42 ವರ್ಷದ ಮಹಿಳೆಯರು ವಿವಿಧ ದಿನಗಳಲ್ಲಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.