ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | 16 ಮಂದಿಗೆ ಠೇವಣಿ ನಷ್ಟ; ‘ನೋಟಾ’ಕ್ಕೆ 3ನೇ ಸ್ಥಾನ

Published 4 ಜೂನ್ 2024, 13:52 IST
Last Updated 4 ಜೂನ್ 2024, 13:52 IST
ಅಕ್ಷರ ಗಾತ್ರ

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ‘ನೋಟಾ’ (ಈ ಮೇಲಿನ ಯಾರಿಗೂ ಇಲ್ಲ) 3ನೇ ಸ್ಥಾನ ಗಳಿಸಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳಾದ ಯದುವೀರ್‌ ಮತ್ತು ಎಂ.ಲಕ್ಷ್ಮಣ ಅವರನ್ನು ಬಿಟ್ಟರೆ ಉಳಿದ 16 ಮಂದಿಗೆ ಠೇವಣಿ ಉಳಿಸಿಕೊಳ್ಳುವುದೂ ಸಾಧ್ಯವಾಗಿಲ್ಲ.

ಕರ್ನಾಟಕ ಜನತಾ ಪಕ್ಷದ ಅಂಬರೀಷ್, ಕರುನಾಡು ಪಾರ್ಟಿಯ ಎಚ್.ಕೆ.ಕೃಷ್ಣ, ಸಮಾಜವಾದಿ ಜನತಾ ಪಾರ್ಟಿಯ ಎಚ್.ಎಂ.ನಂಜುಂಡಸ್ವಾಮಿ, ಕರ್ನಾಟಕ ರಾಷ್ಟ್ರ ಸಮಿತಿಯ ಎಂ.ಎಸ್.ಪ್ರವೀಣ್, ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್ ಅಭ್ಯರ್ಥಿ ಎ.ಜಿ.ರಾಮಚಂದ್ರರಾವ್, ಪ್ರಜಾಕೀಯ ಪಕ್ಷದ ಲೀಲಾ ಶಿವಕುಮಾರ್, ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಟಿ.ಆರ್.ಸುನೀಲ್, ಸೋಶಿಯಲಿಸ್ಟ್ ಪಾರ್ಟಿಯ ಹರೀಶ್‍ಗೌಡ, ಪಕ್ಷೇತರರಾದ ಸಿ.ಜೆ.ಅಂಬೇಡ್ಕರ್, ಕ್ರಿಸ್ಟೋಫರ್ ರಾಜ್‍ಕುಮಾರ್, ದರ್ಶನ್ ಕೆ., ಪಿ.ಎಸ್.ಯಡೂರಪ್ಪ, ರಾಜು, ಎಂ.ರಾಮಮೂರ್ತಿ, ಎಂ.ರಂಗಸ್ವಾಮಿ, ಎ.ಎಸ್.ಸತೀಶ್ ಅವರಿಗೆ ಠೇವಣಿ ನಷ್ಟವಾಗಿದೆ.

ಇಬ್ಬರು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ನಂತರದ ಸ್ಥಾನವನ್ನು ‘ನೋಟಾ’ ಪಡೆದುಕೊಂಡಿದೆ.

ಈ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಒಟ್ಟು 833 ಅಂಚೆ ಮತಗಳು ತಿರಸ್ಕೃತಗೊಂಡಿವೆ. ಇವಿಎಂ ಹಾಗೂ ಅಂಚೆ ಮತಪತ್ರಗಳೆಲ್ಲವೂ ಸೇರಿ 14,79,983 ಮತಗಳು ಸಿಂಧುವಾಗಿದ್ದವು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT