ಮೈಸೂರು: ‘ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘ ಮತ್ತು ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟವು ಜ. 28ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ಹಮ್ಮಿಕೊಂಡಿದೆ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸಿ. ಚಿರಣ್ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಹಮ್ಮಿಕೊಂಡಿದ್ದು, ರಾಜ್ಯದ ವಿಶೇಷ ಶಾಲೆಗಳ ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ ಹಾಗೂ ಯಾವುದೇ ಅನುದಾನ ಪಡೆಯದ 25
ವರ್ಷ ಮೀರಿದ ಬುದ್ಧಿಮಾಂದ್ಯ ಯುವಜನರು ಮತ್ತವರ ಪೋಷಕರು ಭಾಗಿಯಾಗಲಿದ್ದಾರೆ. 2 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದರು.

‘ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದಲ್ಲಿ ಶಿಶು ಕೇಂದ್ರೀಕೃತ ಅನುದಾನ ಪಡೆಯುತ್ತಿರುವ ಶಿಕ್ಷಕ–
ಶಿಕ್ಷಕೇತರ ಸಿಬ್ಬಂದಿಗೆ 1982ರ ಅನು
ದಾನದ ಅಡಿ ದೊರಕುವ ಎಲ್ಲ ಸೌಲಭ್ಯ
ನೀಡಬೇಕು. ಇಲಾಖಿ ನಿರ್ದೇಶಕರು
ವಿಶೇಷ ಶಾಲೆಗಳ ಅನುದಾನವನ್ನು ಶೇ
40ರಷ್ಟು ಏರಿಸುವಂತೆ ಸಲ್ಲಿಸಿರುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಬೇಕು. ಸುಪ್ರೀಂ
ಕೋರ್ಟ್ ಆದೇಶದಂತೆ ಶಿಕ್ಷಕರಿಗೆ
ಪೂರ್ಣ ಪ್ರಮಾಣದ ಭತ್ಯೆ, ಆರ್ಥಿಕ
ಸೌಲಭ್ಯ ನೀಡಬೇಕು. ಶಿಶುಕೇಂದ್ರಿತ ಸಹಾಯಧನ ಯೋಜನೆ ಮಾರ್ಗಸೂಚಿಯನ್ನು 5 ವರ್ಷಕ್ಕೊಮ್ಮೆ ಪುನರ್ ರಚಿಸಬೇಕು. ವಿಶೇಷ ಶಾಲೆಗಳಿಗೆ ವರ್ಷಕ್ಕೆ ಎರಡು ಕಂತುಗಳಲ್ಲಿಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.

ವಿಶೇಷ ಶಾಲೆಗಳ ಮುಖ್ಯಸ್ಥರಾದ ಬಿ.ವಿ. ಪಾಂಡು, ನವೀನ್, ಸುಧಾಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.