ವರ್ಷದಲ್ಲಿ 892 ರೋಗಿಗಳಿಗೆ ಸರ್ಜರಿ
ಈ ಆಸ್ಪತ್ರೆಯಲ್ಲಿ 2024ರಲ್ಲಿ 19047 ಕ್ಯಾತ್‌ಲ್ಯಾಬ್ ಪ್ರಕ್ರಿಯೆ ನಡೆದಿದೆ. 11375 ಮಂದಿಗೆ ಆಂಜಿಯೋಗ್ರಾಂ ಮಾಡಲಾಗಿದ್ದು ಅದರಲ್ಲಿ 6297 ಮಂದಿಗೆ ಆಂಜಿಯೋಪ್ಲಾಸ್ಟಿ ಆಗಿದೆ. 892 ರೋಗಿಗಳಿಗೆ ಸರ್ಜರಿ ಮಾಡಲಾಗಿದೆ. 232129 ಮಂದಿ ಹೊರರೋಗಿಗಳಾಗಿ ಹಾಗೂ 20286 ರೋಗಿಗಳು ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 182963 ಮಂದಿಗೆ ಇಸಿಜಿ ನಡೆಸಲಾಗಿದೆ. 8594 ರೋಗಿಗಳಿಗೆ ಟಿಎಂಟಿ ಮಾಡಲಾಗಿದೆ. ರೋಗಿಗಳಿಗೆ ಉತ್ತಮ ಸೇವೆ ಒದಗಿಸಲು ಹಾಗೂ ಆಸ್ಪತ್ರೆಯ ಆವರಣ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದು ಸದಾನಂದ ತಿಳಿಸಿದರು.