ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಸರಾ ಪಾಸ್‌: ₹ 2.53 ಕೋಟಿ ನಷ್ಟ, ಆರ್‌ಟಿಐನಲ್ಲಿ ಬಹಿರಂಗ

Published 28 ಆಗಸ್ಟ್ 2024, 22:30 IST
Last Updated 28 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ಮೈಸೂರು: ‘ಕಳೆದ ಮೈಸೂರು ದಸರಾ ಸಂದರ್ಭದಲ್ಲಿ ವಿವಿಧ ಪಾಸ್‌ಗಳ ಹಂಚಿಕೆಯಲ್ಲಿ ಸರ್ಕಾರಕ್ಕೆ ನಷ್ಟ ಮತ್ತು ಜನಸಾಮಾನ್ಯರಿಗೆ ವಂಚನೆಯಾಗಿದೆ. ಆರ್‌ಟಿಐ ಮೂಲಕ ದೊರೆತ ಮಾಹಿತಿಯ ಪ್ರಕಾರ, ಒಟ್ಟು 21,086 ಟಿಕೆಟ್‌ಗಳು ಮಾರಾಟವಾಗದೇ ಉಳಿದಿದ್ದು, ₹2.63 ಕೋಟಿ ನಷ್ಟವಾಗಿದೆ’ ಎಂದು ವಾಯ್ಸ್‌ ಆಫ್‌ ಪೀಪಲ್‌ ಸಂಸ್ಥೆ ಅಧ್ಯಕ್ಷ ಎ.ವಸಂತರಾವ್‌ ಚೌಹಾಣ್‌ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಪಾಸ್‌ಗಳನ್ನು ಆನ್‌ಲೈನ್ ಮೂಲಕ ಮಾತ್ರವೇ ಮಾರಾಟ ಮಾಡಲಾಗುವುದು. ಆಫ್‌ಲೈನ್‌ನಲ್ಲಿ ಖರೀದಿಗೆ ಅವಕಾಶವಿಲ್ಲ ಎಂದು ಅಂದಿನ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ತಿಳಿಸಿದ್ದರು. ಆದರೆ ಆನ್‌ಲೈನ್ ಮಾರಾಟ ಶುರುವಾದ ಕೆಲವೇ ನಿಮಿಷಗಳಲ್ಲಿ ಸರ್ವರ್ ಸಮಸ್ಯೆ ಎಂದು ತೋರಿಸಿ, ಬಳಿಕ ಸೋಲ್ಡ್‌ ಔಟ್‌ ಎನ್ನಲಾಯಿತು’ ಎಂದು ದೂರಿದರು.

‘ಸಾರ್ವಜನಿಕರಿಗೆ ಮಾರಾಟ ಮಾಡಲೆಂದೇ ಮೀಸಲಿಟ್ಟಿದ್ದ ‌ಶೇ 32ರಷ್ಟು ಟಿಕೆಟ್‌ಗಳಲ್ಲಿ ಕೇವಲ ಶೇ 6 ಮಾರಾಟವಾಗಿದ್ದರೆ, ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮೀಸಲಿಟ್ಟ ಶೇ 68ರಷ್ಟು ಟಿಕೆಟ್‌ಗಳಲ್ಲಿ ಶೇ 94 ವಿತರಿಸಲಾಗಿದೆ. ಈ ಕುರಿತು ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತ ಹಾಗೂ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದೇವೆ. ಈ ಬಾರಿಯಾದರೂ ದಸರಾ ಟಿಕೆಟ್‌ಗಳ ಹಂಚಿಕೆಯಲ್ಲಿ ಜನರಿಗೆ ನ್ಯಾಯ ದೊರಕಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT