ಹುಣಸೂರು/ ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನ ದಂಚಿನ ಮುದಗನೂರು ಗ್ರಾಮದ ಅಚ್ಚುಕಟ್ಟು ಪ್ರದೇಶಕ್ಕೆ ಭಾನುವಾರ ರಾತ್ರಿ ಕಾಡಾನೆಗಳು ದಾಳಿ ಇಟ್ಟು 14 ರೈತರಿಗೆ ಭತ್ತ, ಬಾಳೆ, ಶುಂಠಿ ಸೇರಿದಂತೆ ಒಟ್ಟು 60 ಎಕರೆ ಬೆಳೆ ನಾಶಪಡಿಸಿವೆ ಗ್ರಾಮಸ್ಥರು ಆರೋಪಿಸಿದ್ದಾರೆ.

ಉತ್ತಮ ಮಳೆಯಿಂದಾಗಿ ವೀರನಹೊಸಹಳ್ಳಿ ವಲಯಕ್ಕೆ ಸೇರಿದ ಮುದಗನೂರು ಕೆರೆ ಭರ್ತಿಯಾಗಿದ್ದು, ಕೆರೆ ಅಂಗಳದಲ್ಲಿ ಅಳವಡಿಸಿರುವ ರೈಲ್ವೆ ಕಂಬಿ ತಡೆಗೋಡೆ ಅವೈಜ್ಞಾನಿಕವಾದ ಕಾರಣ ಆನೆಗಳು ಸರಾಗವಾಗಿ ಗ್ರಾಮಕ್ಕೆ ದಾಳಿ ಇಡುತ್ತಿದೆ. ಕಳೆದ ಮೂರು ವರ್ಷದಿಂದ ಕೆರೆಯಲ್ಲಿ ನೀರಿಲ್ಲದೆ ಆನೆಗಳು ತಡೆಗೋಡೆ ದಾಟುವುದು ಕಷ್ಟ ಸಾಧ್ಯವಿತ್ತು. ಈ ಸಾಲಿನಲ್ಲಿ ಭರ್ತಿಯಾಗಿದ್ದರಿಂದ ಆನೆ ತಡೆಗೋಡೆಯನ್ನು ಸರಾಗವಾಗಿ ಈಜಿ ದಾಟುತ್ತಿದೆ. ಇದರಿಂದಾಗಿ ಮುದಗನೂರು, ಚಿಕ್ಕಹೆಜ್ಜೂರು, ಕೊಳವಿಗೆ, ಭರತವಾಡಿ, ವೀರನಹೊಸಹಳ್ಳಿ, ದೊಡ್ಡಹೆಜ್ಜೂರು, ಪಂಚವಳ್ಳಿ ಭಾಗದ ರೈತರು ಬೆಳೆದ ಫಸಲು ಕಳೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮದ ನಿವಾಸಿ ದಾ.ರಾ.ಮಹೇಶ್ ಆರೋಪಿಸಿದ್ದಾರೆ.

ಕೆರೆ ಅಂಗಳದಲ್ಲಿ ತಡೆಗೋಡೆ 5ರಿಂದ 6 ಮೀಟರ್ ನಿರ್ಮಿಸಿದ್ದು, ಕೆರೆಯಲ್ಲಿ ನೀರು ತುಂಬಿದಾಗ ಸರಾಗವಾಗಿ ಹೊರ ಬರುತ್ತವೆ. ಕೆರೆ ಅಂಗಳದಲ್ಲಿ ತಡೆಗೋಡೆ ಎತ್ತರಿಸಬೇಕು ಎಂದು ನೇರಳಕುಪ್ಪೆ ಮಹದೇವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮುದಗನೂರು ಕೆರೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ 14 ರೈತರಿಗೆ ಸೇರಿದ ಭತ್ತದ ಗದ್ದೆ ಆನೆ ಹಾವಳಿಗೆ ಹಾಳಾಗಿದೆ ಎಂದು ಮುದುಗನೂರು ಸುಭಾಷ್ ಹೇಳಿದರು.

ಪರಿಹಾರ: ಕಾಡಾನೆ ಹಾವಳಿಗೆ ನಾಶವಾದ ಭತ್ತದ ಫಸಲಿಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುದಗನೂರು ಗ್ರಾಮದ ಎಂ.ಜೆ. ಶ್ರೀನಿವಾಸ್‌ರ ಎರಡು ಎಕರೆ ಶುಂಠಿಬೆಳೆ, ನಾಗೇಶ ಶಿವನಂಜೇಗೌಡರಿಗೆ ಸೇರಿದ ಗೋನೆ ಬಿಟ್ಟಿದ್ದ ಒಂದು ಎಕರೆ ಬಾಳೆತೋಟ, ದಿನೇಶ್, ಕಸ್ತೂರಿ ಗೌಡರಿಗೆ ಸೇರಿದ ಗದ್ದೆ ನಾಟಿ ಹಾಗೂ ಮುಸುಕಿನಜೋಳ ಬೆಳೆಯನ್ನು ತಿಂದು ತುಳಿದು ನಾಶಪಡಿಸಿವೆ.

ಇದಲ್ಲದೇ ಶುಂಠಿ ಹಾಗೂ ಬಾಳೆ ತೋಟಕ್ಕೆ ಅಳವಡಿಸಿದ ಸ್ಪಿಂಕ್ಲರ್ ಪೈಪ್‌ಗಳನ್ನು ಸಹ ತುಳಿದು ನಾಶಪಡಿಸಿದೆ. ಬೆಳೆ ನಷ್ಟವಾಗಿರುವ ಸ್ಥಳಕ್ಕೆ ವೀರನಹೊಸಹಳ್ಳಿ ವಲಯದ ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಚಂದ್ರೇಶ್ ಹಾಗೂ ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.