ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮೀಣ ಕ್ರೀಡೆ ಪ್ರೋತ್ಸಾಹಿಸಿ: ಬಿ.ಹರ್ಷವರ್ಧನ್

Published : 15 ಸೆಪ್ಟೆಂಬರ್ 2024, 12:55 IST
Last Updated : 15 ಸೆಪ್ಟೆಂಬರ್ 2024, 12:55 IST
ಫಾಲೋ ಮಾಡಿ
Comments

ನಂಜನಗೂಡು : ಅಪ್ಪಟ ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಮನ್ನಣೆ, ಪ್ರೋತ್ಸಾಹಗಳ ಅಗತ್ಯವಿದೆ ಎಂದು ಬಿಜೆಪಿ ಮುಖಂಡ ಬಿ.ಹರ್ಷವರ್ಧನ್‌ ಹೇಳಿದರು.

ತಾಲ್ಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಭಾನುವಾರ ವಿಸ್ಮಯ ಕ್ರೀಡಾ ಬಳಗ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಕ್ರಿಕೆಟ್‌ ಆಟಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ, ಇದರಿಂದಾಗಿ ನಮ್ಮ ದೇಸಿ ಕ್ರೀಡೆಗಳು ನಶಿಸುತ್ತಿವೆ. ಅತಿಯಾದ ಮೊಬೈಲ್‌ ಫೋನ್‌ ಬಳಕೆಯಿಂದಾಗಿ ಯುವಕರಲ್ಲಿ ಬೊಜ್ಜಿನ ಖಾಯಿಲೆಗಳು ಹೆಚ್ಚುತ್ತಿವೆ. ಕಬಡ್ಡಿ ಆಟ ರಂಜನೆಯ ಜೊತೆಗೆ ದೇಹಕ್ಕೆ ಉತ್ತಮ ವ್ಯಾಯಾಮ ನೀಡುವ ಕ್ರೀಡೆಯಾಗಿದೆ ಎಂದರು.

ಹೆಮ್ಮರಗಾಲ ಗ್ರಾಮದ ಅಭಿವೃದ್ಧಿಗಾಗಿ ಬಿಜೆಪಿ ಆಡಳಿತದ ಅವದಿಯಲ್ಲಿ ₹2.5 ಕೋಟಿ ಅನುದಾನ ನೀಡಿ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗಿತ್ತು, ಯುವಕರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ, ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹೇಳಿದರು.

ಮುಖಂಡರಾದ ಹೆಮ್ಮರಗಾಲ ಸೋಮಣ್ಣ, ಚಿಕ್ಕರಂಗನಾಯ್ಕ, ಶಿವಣ್ಣ, ವೆಂಕಟೇಶ್‌, ನಾಗರತ್ನ ಪುಟ್ಟರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT