ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಾಣಿಗಳಿಗೆ ‘ಉಷಾಕಿರಣ’ ದೃಷ್ಟಿ

Published 14 ಸೆಪ್ಟೆಂಬರ್ 2023, 5:53 IST
Last Updated 14 ಸೆಪ್ಟೆಂಬರ್ 2023, 5:53 IST
ಅಕ್ಷರ ಗಾತ್ರ

ಮೈಸೂರು: ಕಣ್ಣಿನ ಪೊರೆ ಸಮಸ್ಯೆ ಎದುರಿಸುತ್ತಿದ್ದ ಇಬ್ಬರು ಬಾಲಕಿಯರಿಗೆ ನಗರದ ಲಕ್ಷ್ಮಿಪುರಂನಲ್ಲಿರುವ ಉಷಾಕಿರಣ ಕಣ್ಣಿನ ಆಸ್ಪತ್ರೆ ಬೆಳಕು ನೀಡಿದೆ.

ಚಾಮರಾಜನಗರ 13 ವರ್ಷದ ಕೀರ್ತನಾ ಹಾಗೂ ಪಿರಿಯಾಪಟ್ಟಣದ 10 ವರ್ಷದ ಪ್ರಗತಿ ಅವರಿಗೆ ಉಚಿತ ಶಸ್ತ್ರಚಿಕಿತ್ಸೆ ಮೂಲಕ ಆಸ್ಪತ್ರೆಯ ಡಾ.ರವಿಶಂಕರ್ ಹಾಗೂ ಡಾ.ಉಮಾ ರವಿಶಂಕರ್ ಅವರ ವೈದ್ಯರ ತಂಡವು ದೃಷ್ಟಿ ನೀಡಿದೆ.

‘ಇಬ್ಬರೂ ಹುಟ್ಟಿನಿಂದಲೇ ಕಣ್ಣಿನ ಪೊರೆಯ ಸಮಸ್ಯೆ ಎದುರಿಸುತ್ತಿದ್ದರು. ಅತ್ಯಂತ ಕ್ಲಿಷ್ಟಕರ, ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದು ರವಿಶಂಕರ್ ತಿಳಿಸಿದರು.

‘ಕೀರ್ತನ ಅವರು ಬಡ ಕುಟುಂಬಕ್ಕೆ ಸೇರಿದ್ದು, ಎರಡೂ ಕಣ್ಣುಗಳಿಗೆ ಪೊರೆ ಬೆಳೆದು ಕಾಣಿಸುತ್ತಿರಲಿಲ್ಲ. ಅಪಸ್ಮಾರ ಹಾಗೂ ನಡವಳಿಕೆ ಸಮಸ್ಯೆ ಎದುರಿಸುತ್ತಿದ್ದರು. ಮಗು ವೈದ್ಯಕೀಯ ಚಿಕಿತ್ಸೆಗೆ ಕೋಪದ ಪ್ರತಿಕ್ರಿಯೆ ನೀಡುತ್ತಿತ್ತು. ಆಕೆಗೆ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಕೆಲಸವಾಗಿತ್ತು. ಬಲಗಣ್ಣಿನ ಪೊರೆಯನ್ನು ತೆಗೆದು ಲೆನ್ಸ್ ಅಳವಡಿಸಲಾಯಿತು’ ಎಂದರು.

‘ಪ್ರಗತಿ ಪೋಷಕರು ಕೃಷಿ ಕಾರ್ಮಿಕರು. ತಂದೆ -ತಾಯಿ ಹತ್ತಿರದ ರಕ್ತ  ಸಂಬಂಧಿಕರೇ ಆಗಿದ್ದರಿಂದ ಹುಟ್ಟಿನಿಂದಲೇ ಕಣ್ಣಿನ ಪೊರೆ ಜೊತೆಗೆ ಕಣ್ಣಿನ ಬೆಳವಣಿಗೆಯ ದೋಷಗಳಿದ್ದವು. 2020ರಲ್ಲಿ ಕಣ್ಣಿನ ಪೊರೆಗೆ ಶಸ್ತ್ರ ಚಿಕಿತ್ಸೆ ನಡೆಸಿ, ಕೃತಕ ಲೆನ್ಸ್ ಅಳವಡಿಸಲಾಗಿತ್ತು. ಈಗ ಆಕೆಯ ಬಲಗಣ್ಣಿನಲ್ಲಿ ಪಿಸಿಒ ಸಮಸ್ಯೆ ಕಾಣಿಸಿಕೊಂಡಿತ್ತು. ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲಾಗಿದೆ’ ಎಂದರು.

‘ಹತ್ತಿರದ ರಕ್ತ ಸಂಬಂಧಿಗಳಲ್ಲೇ ಮದುವೆಯಾದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂಥ ಮದುವೆಗಳನ್ನು ತಪ್ಪಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT