ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹನಗೋಡು: ನೇರಳಕುಪ್ಪೆ ವಿದ್ಯಾರ್ಥಿಗಳಿಗೆ ಅರಣ್ಯ ದರ್ಶನ

Published 27 ಆಗಸ್ಟ್ 2024, 15:31 IST
Last Updated 27 ಆಗಸ್ಟ್ 2024, 15:31 IST
ಅಕ್ಷರ ಗಾತ್ರ

ಹನಗೋಡು: ಶಾಲಾ ಕೊಠಡಿಯೊಳಗೆ ಕುಳಿತು ಕಾಡು, ವನ್ಯಪ್ರಾಣಿಗಳು, ಪಕ್ಷಿ, ಗಿಡ-ಮರ ಹಾಗೂ ಪರಿಸರದ ಬಗ್ಗೆ ಅರಿಯುತ್ತಿದ್ದ ವಿದ್ಯಾರ್ಥಿಗಳು ನಾಗರಹೊಳೆ ಪ್ರಕೃತಿಯ ಮಡಿಲಿಗೆ ಭೇಟಿ ನೀಡಿ ಪರಿಸರ ಉಳಿವಿನ ಬಗ್ಗೆ ಮಾಹಿತಿ ಪಡೆದುಕೊಂಡರು.

 ಹುಣಸೂರು ವನ್ಯಜೀವಿ ವಿಭಾಗದಿಂದ ಚಿಣ್ಣರ ವನ ದರ್ಶನ ಯೋಜನೆಯಡಿ ನೇರಳಕುಪ್ಪೆ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳನ್ನು ಎರಡು ದಿನ ನಾಗರಹೊಳೆ ರಾಷ್ಟೀಯ ಉದ್ಯಾನಕ್ಕೆ ಕರೆದೊಯ್ದು ಅರಣ್ಯದ ಮಹತ್ವ, ವನ್ಯಜೀವಿಗಳ ಸಂರಕ್ಷಣೆ, ಪರಿಸರ ಉಳಿವಿನ ಅಗತ್ಯತೆ ಕುರಿತು ಮಾಹಿತಿ ಪಡೆದರು.

ಸಸ್ಯ ಕ್ಷೇತ್ರಕ್ಕೆ ಭೇಟಿ; ಹುಣಸೂರು ನಗರದ ಕಲ್ ಬೆಟ್ಟದ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಹಾಗೂ ಅರಣ್ಯ ಇಲಾಖೆ ಕಚೇರಿ ಹಿಂಭಾಗದ ಇಲಾಖೆ ಸಸ್ಯ ಕ್ಷೇತ್ರಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿದರು.

ಹುಣಸೂರು ವನ್ಯಜೀವಿ ವಲಯದ ಆರ್ ಎಪ್ ಒ.ಸುಬ್ರಮಣ್ಯ ಶ್ರೀಗಂಧ, ತೇಗ, ಬೀಟೆ, ಹೊನ್ನೆ, ಮತ್ತಿ, ನೆಲ್ಲಿಕಾಯಿ, ಬೂರಗ ಸೇರಿ ವಿವಿಧ ಜಾತಿಯ ಸಸಿಗಳನ್ನು ಪರಿಚಯಿಸಿ ಇವುಗಳ ಅಗತ್ಯತೆ ಹಾಗೂ ಈ ಮರಗಳಿಂದಾಗುವ ಅನುಕೂಲಗಳನ್ನು ತಿಳಿಸಿಕೊಟ್ಟರು.

‘ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿಣ್ಣರ ವನದರ್ಶನವೆಂಬ ಕಾರ್ಯಕ್ರಮ ಆಯೋಜಿಸಿದೆ, ಈ ಯೋಜನೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ವನ್ಯಜೀವಿ ಪ್ರೇಮ ಬೆಳೆಸುವಲ್ಲಿ ಸಹಕಾರಿಯಾಗಿದೆ’ ಎಂದು ಹುಣಸೂರು ವನ್ಯಜೀವಿ ವಲಯ ಆರ್ ಎಫ್ ಓ ಸುಬ್ರಮಣ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಡಿ.ಆರ್.ಎಪ್.ಒ. ಪ್ರಮೋದ್, ಶಾಲಾ ಮುಖ್ಯಶಿಕ್ಷಕ ಕುಮಾರಸ್ವಾಮಿ, ಅರಣ್ಯ ರಕ್ಷಕ ಮಧು ಸೇರಿದಂತೆ ಶಾಲಾ ಶಿಕ್ಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT