ಮೈಸೂರು: ಇಲ್ಲಿನ ಸದರ್ನ್ ಸ್ಟಾರ್ ಹೋಟೆಲ್ನಲ್ಲಿ ‘ಮೈಸೂರು ಸಾಹಿತ್ಯ ಸಂಭ್ರಮ’ ಜುಲೈ 5 ಹಾಗೂ 6ರಂದು ನಡೆಯಲಿದೆ. 5ರಂದು ಬೆಳಿಗ್ಗೆ 10ಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಉದ್ಘಾಟಿಸುವರು. ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್, ಅನುವಾದಕಿ ದೀಪಾ ಭಾಸ್ತಿ ಪಾಲ್ಗೊಳ್ಳುವರು.

‘ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್’ ಹಾಗೂ ‘ಮೈಸೂರು ಬುಕ್ ಕ್ಲಬ್ಸ್’ ಆಯೋಜಿಸುತ್ತಿರುವ 9ನೇ ಆವೃತ್ತಿಯ ಸಮ್ಮೇಳನ ಇದಾಗಿದೆ. ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ನಿವೃತ್ತ ವಿಜ್ಞಾನಿ ಪ್ರಹ್ಲಾದ ರಾಮರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು’ ಎಂದು ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕನ್ನಡ, ಇಂಗ್ಲಿಷ್ ಸಾಹಿತ್ಯ ಗೋಷ್ಠಿಗಳು ಎರಡೂ ದಿನ ನಡೆಯಲಿವೆ. ಲೇಖಕರಾದ ಗೋಪಾಲಕೃಷ್ಣಗಾಂಧಿ, ಅನಿತಾ ನಾಯರ್, ಮಣಿಶಂಕರ್ ಅಯ್ಯರ್, ಸ್ಟೀಫನ್ ಆಲ್ಟರ್, ಅರುಂಧತಿ ಘೋಷ್, ವಿಷ್ಣುಸೋಮ್, ಮಿತಾ ಕಪೂರ್, ಲಕ್ಷ್ಮೀಶ ತೋಳ್ಪಾಡಿ, ಅಬ್ದುಲ್ ರಶೀದ್, ವನಮಾಲಾ ವಿಶ್ವನಾಥ್, ಕೆ.ಎನ್.ಗಣೇಶಯ್ಯ ಸೇರಿದಂತೆ 104 ಸಾಹಿತಿಗಳು ಹಾಗೂ ಕಲಾವಿದರು ಪಾಲ್ಗೊಳ್ಳುವರು’ ಎಂದು ತಿಳಿಸಿದರು.

‘ಪುಸ್ತಕ ಬಿಡುಗಡೆ, ಪ್ರದರ್ಶನ ಮಾರಾಟ ಇರಲಿದ್ದು, ಉಚಿತ ಪ್ರವೇಶವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.