ಎಚ್.ಡಿ.ಕೋಟೆ: ಇಲ್ಲಿಯ ಶ್ರೀ ವಾರಾಹಿ ಮತ್ತು ಮಾರಮ್ಮನ ಕೊಂಡೋತ್ಸವ ಮತ್ತು ಜಾತ್ರಾ ಮಹೋತ್ಸವದ 2 ನೇ ದಿನವಾದ ಮಂಗಳವಾರ ಗುಡಿಯ ಮುಂಭಾಗ ಕೊಂಡದ ಗುಳಿಯನ್ನು ಜೆಸಿಬಿಯ ಮೂಲಕ ತೋಡಲಾಯಿತು.

ಕೊಂಡೋತ್ಸವ ಬುಧವಾರ ಅದ್ದೂರಿಯಾಗಿ ನಡೆಯಲಿದ್ದು ಭರದ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಕೊಂಡಕ್ಕಾಗಿ 101 ಗಾಡಿಯಲ್ಲಿ ಸಂಗ್ರಹಿಸಿರುವ ಕಗ್ಗಲಿ ಸೌದೆಗೆ ಸಂಪ್ರದಾಯದಂತೆ ಅಗ್ನಿ ಸ್ಪರ್ಶವನ್ನು ಮಾಡಲು ಹದಗೊಳಿಸಲಾಯಿತು.

ಬುಧವಾರ ನಡೆಯಲಿರುವ ಉತ್ಸವದಲ್ಲಿ ಕೊಂಡವನ್ನು ಹಾಯುವ ಪೂಜಾರಿಗಳು, ಮೂರು ದಿನಗಳಿಂದ ಉಪವಾಸ, ವ್ರತಾಚರಣೆಗಳನ್ನು ಮಾಡಿ , ಹಳ್ಳಿಯ ಜನರಿಗೆ ಆಶೀರ್ವಾದ ಆರೋಗ್ಯ ಹಾಗೂ ಭಾಗ್ಯ ಸಿಗಲೆಂದು ದೇವಿಯನ್ನು ಪ್ರಾರ್ಥಿಸಿದರು.

ಸಾರ್ವಜನಿಕರು ದೇವಸ್ಥಾನದಲ್ಲಿ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ. ಒಂಭತ್ತು ವರ್ಷಗಳ ಹಿಂದೆ ನಡೆದಿದ್ದ ಜಾತ್ರೆ ಈ ವರ್ಷ ನಡೆಯುತ್ತಿರುವುದು ಗ್ರಾಮದ ಜನತೆಯಲ್ಲಿ ಸಂಭ್ರಮವನ್ನುಂಟು ಮಾಡಿದ್ದು, ಅದ್ದೂರಿಯಾಗಿ ಆಚರಿಸಲು ಪಟ್ಟಣದ ಜನತೆ ಸಜ್ಜಾಗಿದ್ದಾರೆ.

ಪಟ್ಟಣದ ಹಳೆ ಆಸ್ಪತ್ರೆ ಜಾಗದಲ್ಲಿ, ಶ್ರೀ ವರದರಾಜಸ್ವಾಮಿ ದೇವಸ್ಥಾನದ ಮುಂಭಾಗ ಮತ್ತು ಇತರೆ ಸ್ಥಳಗಳಲ್ಲಿ ಕೊಂಡ ವೀಕ್ಷಿಸಲು ದೊಡ್ಡ ಎಲ್ಇಡಿ ವಾಲ್ಗಳನ್ನು ತಾಲ್ಲೂಕು ಛಾಯಾಗ್ರಾಕರ ಸಂಘ ಅಳವಡಿಸಿ, ಭಕ್ತರಿಗೆ ಅನುಕೂಲ ಕಲ್ಪಿಸಿದ್ದಾರೆ.

ಭಕ್ತರ ದಂಡು

ಗ್ರಾಮದ ಪ್ರತಿ ಮನೆಳಿಗೆ ದೂರದ ಊರುಗಳಿಂದ ನೆಂಟರಿಷ್ಟರುಗಳು ಬಂದು ಗ್ರಾಮದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 9 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿರುವುದು ಪಟ್ಟಣದಾದ್ಯಂತ ಸಂಭ್ರಮ ಮನೆ ಮಾಡಿದ್ದು ಭಕ್ತರ ದಂಡು ಪಟ್ಟಣದಲ್ಲಿ ನೆರೆದಿದೆ. ದೇವಸ್ಥಾನದಲ್ಲಿ ನಿರಂತರವಾಗಿ ಪೂಜೆಗಳು ವಿವಿಧ ಕಾರ್ಯಕ್ರಮಗಳು ನೆರವೇರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.