ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸಮಸ್ಯೆ, ದುಃಖಗಳೆಲ್ಲಾ ಹಂತ ಹಂತವಾಗಿ ದೂರವಾಗುವುದು
Published 30 ಸೆಪ್ಟೆಂಬರ್ 2023, 18:30 IST
ಪ್ರಜಾವಾಣಿ ವಿಶೇಷ
author
ಮೇಷ
ಉದ್ಯೋಗ ದೊರೆಯುವ ಸುಳಿವಿನ ಕಾರಣದಿಂದಾಗಿ ಜೀವನದಲ್ಲಿನ ಸಮಸ್ಯೆಗಳು ಮತ್ತು ದುಃಖಗಳೆಲ್ಲಾ ಹಂತ ಹಂತವಾಗಿ ದೂರಾಗುವುದು. ವೈದ್ಯಕೀಯ ವಿದ್ಯಾರ್ಥಿ ಸಮೂಹಕ್ಕೆ ಉತ್ತಮ ಅವಕಾಶಗಳು ಲಭಿಸಲಿವೆ.
ವೃಷಭ
ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳು ಹೆಚ್ಚಾಗಲಿದ್ದು ನಿಮ್ಮ ವ್ಯಾಪಾರ, ವ್ಯವಹಾರಕ್ಕೆ ಆತಂಕದ ಪರಿಸ್ಥಿತಿ ಎದುರಾಗಬಹದು. ಖರ್ಚು ಕಡಿಮೆ ಮಾಡಿ. ಸ್ನೇಹಿತರಿಂದ ಸಹಾಯ ಸಹಕಾರಗಳು ಸಕಾಲದಲ್ಲಿ ದೊರೆಯಲಿದೆ.
ಮಿಥುನ
ಆಸ್ತಿ ವಿಷಯಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ. ಶಿವನ ಆರಾಧನೆಯಿಂದಾಗಿ ನಿಮ್ಮ ಅಭೀಷ್ಟ ಪ್ರಾಪ್ತಿಯಾಗುವುದು. ಪ್ರಾಪ್ತ ವಯಸ್ಕರಿಗೆ ವಿವಾಹ ನಿಶ್ಚಯವಾಗುವುದು.
ಕರ್ಕಾಟಕ
ತಾಂತ್ರಿಕ ಕ್ಷೇತ್ರದಲ್ಲಿನ ನಿಮ್ಮ ಸಲಹೆ ಸೂಚನೆಗಳಿಗೆ ನಿಮ್ಮ ಅಧಿಕಾರಿ ವರ್ಗದವರಲ್ಲಿ ಹೆಚ್ಚು ಮನ್ನಣೆ ಸಿಗಲಿದೆ. ಆಹಾರ ಬೆಳೆಗಳು ರೈತರಿಗೆ ನಿರೀಕ್ಷೆಗೂ ಮೀರಿದ ಆದಾಯ ತರಲಿದೆ. ಯಾತ್ರೆ ಕೈಗೊಳ್ಳುವ ಮನಸ್ಸಾಗಲಿದೆ.
ಸಿಂಹ
ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಒಂದು ಸುಮಧುರ ಘಟನೆಯು ಇಂದು ನಿಮ್ಮ ಬಾಳಲ್ಲಿ ನಡೆಯಲಿದೆ. ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಪರಿಣಾಮಕಾರಿಯಾದ ಬದಲಾವಣೆ ಉಂಟು ಮಾಡಲಿದ್ದೀರಿ.
ಕನ್ಯಾ
ರಾಜಕೀಯ ವ್ಯಕ್ತಿಗಳಿಗೆ ವಿರೋಧ ಪಕ್ಷದವರಿಂದ ಅಥವಾ ಶತ್ರುಗಳಿಂದ ತೊಂದರೆ ಆಗಬಹುದು. ಇಂದಿನ ಯೋಜನೆಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು. ಉತ್ತಮ ದೈವ ಬಲವಿದ್ದು ಸಂಪತ್ತು ಕೈಗೂಡುವುದು.
ತುಲಾ
ಕುಟುಂಬದ ಸರ್ವತೋಮುಖ ಬೆಳವಣಿಗೆಗೆ ನಿಮ್ಮ ಪಾತ್ರ ಬಹಳ ಮುಖ್ಯ ಎಂಬುದು ನಿಮ್ಮ ಕುಟುಂಬ ವರ್ಗಕ್ಕೆ ಮನದಟ್ಟಾಗುವುದು. ವಿವಾಹ ಪ್ರಸ್ತಾಪಗಳು ಬಲಗೊಂಡು ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ.
ವೃಶ್ಚಿಕ
ರಾಜಕೀಯ ರಂಗ ಪ್ರವೇಶಿಸಲು ತೀರ್ಮಾನಿಸುವುದಕ್ಕೆ ಈ ದಿನ ಸೂಕ್ತ ಕಾಲ. ಕುಟುಂಬದಲ್ಲಿದ್ದಂಥ ವೈಮನಸ್ಸು, ಭಿನ್ನಾಭಿಪ್ರಾಯಗಳು ನಿರಾತಂಕವಾಗಿ ದೂರಾಗಲಿವೆ. ಹಸಿರು ಬಣ್ಣ ನಿಮ್ಮ ವ್ಯಕ್ತಿತ್ವಕ್ಕೆ ಉತ್ತಮವಾಗಿರುವುದು.
ಧನು
ಹಿಂದೆ ಮಾಡಿದ ತಪ್ಪುಗಳಿಗೆ ಇಂದು ಪಶ್ಚಾತಾಪ ಪಡುತ್ತಿದ್ದರೂ ಪುನಃ ತಪ್ಪುಗಳು ಪುನರಾವರ್ತನೆಯಾಗುತ್ತಿವೆ. ಅತಿಯಾದ ಆಲಸ್ಯ, ನಿದ್ದೆಯಂತಹ ಸಮಸ್ಯೆ ನಿಮ್ಮನ್ನು ಕಾಡಲಿದೆ. ಮಾತನಾಡುವಾಗ ಎಚ್ಚರವಹಿಸಿ.
ಮಕರ
ಇಂದಿನ ಜೀವನದಲ್ಲಿ ನಿಮಗೆದುರಾಗಿ ಬರುತ್ತಿರುವ ಅದೃಷ್ಟದ ಲಾಭವನ್ನು ವ್ಯರ್ಥವಾಗದಂತೆ ಪಡೆದುಕೊಳ್ಳಲು ನಿಮ್ಮ ಪರಿಪೂರ್ಣ ಪ್ರಯತ್ನವನ್ನು ಹಾಕುವುದು ಅಗತ್ಯ. ಗುರು-ಹಿರಿಯರ ದರ್ಶನ ಭಾಗ್ಯವಿರುವುದು.
ಕುಂಭ
ವಿದ್ಯಾರ್ಥಿಗಳ ಉತ್ತಮ ಶ್ರೇಣಿಯ ಕನಸು ನನಸಾಗುವುದು. ಇಷ್ಟಪಟ್ಟ ರೀತಿ ಉದ್ಯೋಗಾವಕಾಶಗಳು ಕೂಡ ದೊರಕುವ ಸಾಧ್ಯತೆ ಇದೆ. ಶ್ರೀ ಲಕ್ಷ್ಮಿಯನ್ನು ಪೂಜಿಸಿದಲ್ಲಿ ಏಳಿಗೆ ಹೊಂದಲು ಸಾಧ್ಯವಾಗುವುದು.
ಮೀನ
ಬೆಳ್ಳಿ-ಬಂಗಾರ ಮಾರಾಟಗಾರರಿಗೆ ಬಿಡುವಿಲ್ಲದಂತಹ ವ್ಯಾಪಾರ ಆಗುವುದು. ನೆರೆಹೊರೆಯವರು ನಿಮ್ಮ ಸರಳತೆಯನ್ನು ದುರುಪಯೋಗ ಪಡೆಸಿಕೊಂಡಾರು ಗಮನವಿರಲಿ. ಚೋರ ಕೃತ್ಯಗಳು ನಡೆಯುವ ಸಂಭವವಿದೆ.