ಯತೀಂದ್ರ ನೋಡಿಕೊಳ್ಳುತ್ತಾರೆ...
‘ನಾನು ಹೆಚ್ಚಾಗಿ ಕ್ಷೇತ್ರಕ್ಕೆ ಬರುವುದಕ್ಕೆ ಆಗುತ್ತಿಲ್ಲ. ಆದರೆ ಅಭಿವೃದ್ಧಿ ಕಾರ್ಯ ನಿಂತಿಲ್ಲ. ಜನರು ನಾನು ಕ್ಷೇತ್ರಕ್ಕೆ ಬರುತ್ತಿಲ್ಲ ಎಂದು ತಪ್ಪು ತಿಳಿದುಕೊಳ್ಳಬಾರದು’ ಎಂದು ಸಿದ್ದರಾಮಯ್ಯ ಕೋರಿದರು. ‘ಮೇಲ್ಮನೆ ಸದಸ್ಯರಾದ ಯತೀಂದ್ರ ಕ್ಷೇತ್ರವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದಾರೆ. ಮೈಸೂರಿಗೆ ಬಂದಾಗಲೆಲ್ಲಾ ಜನರನ್ನು ಭೇಟಿಯಾಗುತ್ತಿರುತ್ತೇನೆ. ನನ್ನ ಗೈರುಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ–ಸುಖವನ್ನು ಅವರು ಕೇಳುತ್ತಿದ್ದಾರೆ. ಗ್ರಾಮಗಳಿಗೂ ಭೇಟಿ ಕೊಡುತ್ತಿದ್ದಾರೆ’ ಎಂದ ಅವರು ‘ಹೌದೋ ಅಲ್ಲವೋ’ ಎಂದು ನೆರೆದಿದ್ದವರನ್ನು ಕೇಳಿದರು. ಜನರು ‘ಹೌದು’ ಎಂದು ಕೂಗಿದರು.