‘ವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವವಿರಲಿ’
‘ಮಹಿಷ ದಸರಾ ವಿಷಯದಲ್ಲಿ ಇಡೀ ಇತಿಹಾಸವನ್ನೇ ನಾಶ ಮಾಡಲಾಗಿದೆ. ದೇಶದ ವ್ಯವಸ್ಥೆಯನ್ನೂ ಹಾಳು ಮಾಡಿದ್ದಾರೆ. ವ್ಯಕ್ತಿಯು ತನ್ನ ಸಾಂಸ್ಕೃತಿಕ ಧಾರ್ಮಿಕ ಆಚರಣೆಯಾಗಿ ಮಹಿಷಾ ದಸರಾ ಮಾಡಲು ಯಾರೂ ಅಡ್ಡಿ ಮಾಡಬಾರದು. ಸರ್ಕಾರವೂ ಸಹಕರಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು. ‘ಇಂದು ಪರಿಶಿಷ್ಟ ಹಿಂದುಳಿದ ವರ್ಗಗಳ ಯುವಜನತೆಯೂ ಮೇಲ್ವರ್ಗದ ಆಲೋಚನೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು ತಮ್ಮ ಪೂರ್ವಿಕರ ಸಂಸ್ಕೃತಿ ಆಚರಣೆಗೆ ಬೆಲೆ ನೀಡುತ್ತಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಬರುವ ಸುಳ್ಳುಗಳೇ ಅವರನ್ನು ಆವರಿಸಿದೆ’ ಎಮದು ಬೇಸರ ವ್ಯಕ್ತಪಡಿಸಿದರು.