ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿನಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚು: ನ್ಯಾಯಾಧೀಶ ಕೆ.ಟಿ.ಸತೀಶ್

ಮಾದಕ ವಸ್ತು ಸೇವನೆ ದುಷ್ಪರಿಣಾಮ ಕುರಿತು ಮಾಹಿತಿ ಕಾರ್ಯಕ್ರಮ
Published 1 ಅಕ್ಟೋಬರ್ 2023, 14:57 IST
Last Updated 1 ಅಕ್ಟೋಬರ್ 2023, 14:57 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ‘ತಾಲ್ಲೂಕಿನಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗಿದೆ’ ಎಂದು ಸಿವಿಲ್‌ ನ್ಯಾಯಾಧೀಶ ಕೆ.ಟಿ.ಸತೀಶ್ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ‌ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್ಎಸ್ಎಸ್ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಾದಕ ವಸ್ತು ಸೇವನೆಯಿಂದಾಗುವ ದುಷ್ಪರಿಣಾಮ ಕುರಿತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ತಾಲ್ಲೂಕಿನ ಡಿ.ಬಿ ಕುಪ್ಪೆ ಭಾಗದಲ್ಲಿ ಈಚೆಗೆ ಮಾದಕ ವಸ್ತು ಸೇವನೆ ಕುರಿತು ಪ್ರಕರಣವು ಸಹ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ದಾಸರಾಗದಿರಿ. ಈ ಬಗ್ಗೆ ಕಂಡುಬಂದಲ್ಲಿ ಪ್ರಾಧಿಕಾರದ ಗಮನಕ್ಕೆ ತನ್ನಿ. ಎಲ್ಲಾ ವರ್ಗದವರಿಗೂ ಸಹ ನ್ಯಾಯ ಒದಗಿಸಲು ಕಾನೂನು ಸೇವಾ ಪ್ರಾಧಿಕಾರ ಸ್ಥಾಪನೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ವಕೀಲರಾದ ಸರಸ್ವತಿ‌ ಮಾತನಾಡಿ, ‘ನಾವು ಸರಿ ಮಾರ್ಗದಲ್ಲಿ ನಡೆದುಕೊಂಡು ಹೋಗಬೇಕು. ಯಾವ ಪೋಷಕರು ಅಡ್ಡದಾರಿಗೆ ದೂಡುವುದಿಲ್ಲ. ಮಕ್ಕಳು ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡುತ್ತಾ ಬೆಳೆಯಲಿ ಎಂಬ ಭಾವದಿಂದ ಬೆಳೆಸುತ್ತಾರೆ‌. ಅವರು ಬೆಳೆಯುವಾಗ ದುಷ್ಟರ ಸಹವಾಸದಿಂದ ಅಡ್ಡ ದಾರಿ‌ ತುಳಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ದುಷ್ಟರ ಸಂಗ ಮಾಡಬಾರದು’ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಅರುಣ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ರವಿಕುಮಾರ್, ವಕೀಲರಾದ ಮಣಿರಾಜ್, ಉಪನ್ಯಾಸಕರಾದ ಪುಟ್ಟರಾಜು, ದೈಹಿಕ ಶಿಕ್ಷಣ ನಿರ್ದೇಶಕ ಪುಟ್ಟರಾಜು, ಕಾತ್ಯಾಯಿನಿ, ಕನ್ನಡ ವಿಭಾಗದ ಮುಖ್ಯಸ್ಥ ಕೃಪಾ ಗಣೇಶ್, ಕೆಂಪರಾಜು, ರಾಜಶೇಖರ್, ದಮ್ಮೂರಪ್ಪ, ಗುರುದತ್ ಕಾಮತ್, ಬೋರಮ್ಮ ಎಚ್.ಅಂಗಡಿ, ಕಾಲೇಜಿನ ಸಿಬ್ಬಂದಿಗಳಾದ ಬಾಲಜಿ, ಮಹದೇವಮ್ಮ, ಸುಶ್ಮಿತ, ರವಿ, ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT