ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕರಿಗೆ ಕಸ್ತೂರಬಾ ಗಾಂಧಿ ಪ್ರಶಸ್ತಿ

ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜದಿಂದ ಪ್ರಶಸ್ತಿ ಪ್ರದಾನ
Last Updated 19 ಡಿಸೆಂಬರ್ 2020, 13:36 IST
ಅಕ್ಷರ ಗಾತ್ರ

ಮೈಸೂರು: ಶ್ರೀ ಶಿವರಾತ್ರೀಶ್ವರ ಮಹಿಳಾ ಸಮಾಜದ ವತಿಯಿಂದ ವಿವಿಧ ಕ್ಷೇತ್ರದ ಆರು ಸಾಧಕರಿಗೆ ಶನಿವಾರ ಕಸ್ತೂರಬಾ ಗಾಂಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಸದಸ್ಯೆ ಸುನಂದಾ ಪಾಲನೇತ್ರ(ಸಾರ್ವಜನಿಕ ಕ್ಷೇತ್ರ), ಡಾ.ಪಿ.ಬಿ.ಇಂದುಕಲಾ ಅರಸ್(ಶಿಕ್ಷಣ ಕ್ಷೇತ್ರ), ಡಾ.ಬಿ.ಎಸ್‌.ಸೀತಾಲಕ್ಷ್ಮಿ(ವೈದ್ಯಕೀಯ ಕ್ಷೇತ್ರ), ಲೀಲಾ ವಾಸುದೇವ್(ಸಂಶೋಧನಾ ಕ್ಷೇತ್ರ), ಶಶಿಕಲಾ ಸುಬ್ಬಣ್ಣ (ಸಮಾಜಸೇವಾ ಕ್ಷೇತ್ರ), ಸಬಿಕೆ ನೂಬಾ(ಪರಿಸರ ವಿಜ್ಞಾನಿ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಮಾಜ, ಎಲ್ಲರನ್ನೂ ಗೌರವಿಸಿ ಅಭಿನಂದಿಸಿತು.

ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಮಾತನಾಡಿ, ‘ಸಾಹಿತ್ಯ ಕ್ಷೇತ್ರದ ಗಣಿಯಾಗಿರುವ ಮಡ್ಡಿಕೆರೆ ಗೋಪಾಲ್ ಜಿಲ್ಲಾ ಕಸಾಪ ಅಧ್ಯಕ್ಷರಾಗಲಿ. ಮೂರು ಬಾರಿ ಪಾಲಿಕೆ ಸದಸ್ಯರಾಗಿರುವ ಸುನಂದಾ ಪಾಲನೇತ್ರ ಮೇಯರ್ ಆಗಲಿ’ ಎಂದು ಆಶಿಸಿದರು.

ಸಂಧ್ಯಾ ಸುರಕ್ಷಾ ಟ್ರಸ್ಟ್‌ನ ಅಧ್ಯಕ್ಷ ಬಿ‌.ಆರ್.ನಟರಾಜ ಜೋಯಿಸ್ ಮಾತನಾಡಿ ‘ನಮ್ಮ ಹಿಂದಿನ ಪರಂಪರೆಯನ್ನು ಮುಂದಿನ ಪಿಳೀಗೆಗೆ ತಿಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಪೂರಕವಾಗಿವೆ’ ಎಂದರು.

ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ.ಎಂ.ಜಿ.ಆರ್.ಅರಸ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಗೌರವ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಂ.ಚಂದ್ರಶೇಖರ್, ಶ್ರೀ ಶಿವರಾತ್ರಿಶ್ವರ ಮಹಿಳಾ ಸಮಾಜದ ಅಧ್ಯಕ್ಷೆ ಚುಟುಕು ಸಿರಿರತ್ನ ಹಾಲಪ್ಪಗೌಡ, ಪ್ರಧಾನ ಕಾರ್ಯದರ್ಶಿ ಎ.ಗಾಯತ್ರಿ ಕದಂಬ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT