ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು | ಕಿಸಾನ್ ಸಮ್ಮಾನ್: 10 ಸಾವಿರ ರೈತರಿಗೆ ಜಮೆ ಆಗದ ನಗದು

ಇ–ಕೆವೈಸಿ ದಾಖಲಿಸಲು ಕೃಷಿ ಅಧಿಕಾರಿಗಳ ಅಭಿಯಾನ
Published 23 ಮೇ 2023, 19:30 IST
Last Updated 23 ಮೇ 2023, 19:30 IST
ಅಕ್ಷರ ಗಾತ್ರ

ಹುಣಸೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೋಂದಾಯಿಸಿದ್ದ 10 ಸಾವಿರ ಕೃಷಿಕರಿಗೆ ಕೇಂದ್ರ ಸರ್ಕಾರದ ಹಲವು ಕಂತು ಹಣ ಬ್ಯಾಂಕ್ ಖಾತೆಗೆ ಜಮಾ ಆಗದ ಬಗ್ಗೆ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.

ತಾಲ್ಲೂಕಿನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 35 ರಿಂದ 40 ಸಾವಿರ ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದು, ಹಲವು ಕಂತುಗಳ ಹಣ ಪಡೆದಿದ್ದರು. ಇತ್ತೀಚೆಗೆ 12 ಮತ್ತು 13ನೇ ಕಂತಿನ ಹಣ ₹ 2 ಸಾವಿರ, 10,700 ರೈತರಿಗೆ ಸಂದಾಯವಾಗಿಲ್ಲ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶ್ ತಿಳಿಸಿದರು.

ಅಭಿಯಾನ: ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಆಗದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಅಭಿಯಾನ ಆರಂಭಿಸಿ ಫಲಾನುಭವಿಗಳ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸುವಲ್ಲಿ ನಿರತರಾಗಿದ್ದಾರೆ. ತಾಲ್ಲೂಕಿನ ಮರೂರು, ಉದ್ದೂರು, ಆಸ್ಪತ್ರೆ ಕಾವಲ್, ಬನ್ನಿಕುಪ್ಪೆ, ಹುಸೇನ್ ಪುರ, ಆಯರಹಳ್ಳಿ, ಚಿಲ್ಕುಂದ ಚೆನ್ನಸೋಗೆ ಗ್ರಾಮಗಳಲ್ಲಿ ಈಗಾಗಲೇ ಅಭಿಯಾನ ನಡೆದಿದೆ.

ಗ್ರಾಮಗಳಿಗೆ ಕೃಷಿ ಅಧಿಕಾರಿಗಳ ತಂಡ ಭೇಟಿ ನೀಡಿ ಹಾಲಿನ ಡೇರಿ, ಸೊಸೈಟಿಗಳಲ್ಲಿ ಬೆಳಿಗ್ಗೆ 6 ರಿಂದ 8 ಮತ್ತು ಸಂಜೆ 7 ರಿಂದ 8 ಗಂಟೆವರಗೆ ಆಧಾರ್ ಲಿಂಕ್ ಮಾಡುವ ಕೆಲಸ ನಡೆದಿದೆ. ಕೆಲವು ಫಲಾನುಭವಿಗಳ ಮೊಬೈಲ್ ಇಲ್ಲದೆ, ಬೇರೆಯವರ ಸಂಖ್ಯೆ ಬಳಸಿ,  ನೋಂದಣಿ ಮಾಡಿಸಿದ್ದು, ಇವರ ಹೆಸರುಗಳನ್ನು ಬೈಯೋಮೆಟ್ರಿಕ್ ಮೂಲಕ ದಾಖಲಿಸುವ ಕೆಲಸ ನಡೆದಿದೆ ಎಂದರು.

ಸರ್ಕಾರಿ ಯೋಜನೆಗಳ ಫಲಾನುಭವಿಗಳು ಇ–ಕೆವೈಸಿ ಮಾಡಿಸುವುದು ಕಡ್ಡಾಯ ಆಧಾರ್ ಸಂಖ್ಯೆ ಜೋಡಣೆ ಮಾಡಿಸಬೇಕು. ಇದನ್ನು ಮಾಡಿಸದ ಫಲಾನುಭವಿಗಳಿಗೆ ಸರ್ಕಾರಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ.
ವೆಂಕಟೇಶ್ ಸಹಾಯ ನಿರ್ದೇಶಕರು ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT